ಭಾರತಕ್ಕೆ ಗೆಲುವಿನ ಹ್ಯಾಟ್ರಿಕ್

7
ಅಂಧರ ಟಿ-20 ವಿಶ್ವಕಪ್: ವಿಂಡೀಸ್‌ಗೆ ಮತ್ತೊಂದು ಸೋಲು

ಭಾರತಕ್ಕೆ ಗೆಲುವಿನ ಹ್ಯಾಟ್ರಿಕ್

Published:
Updated:

ಬೆಂಗಳೂರು: ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಕಷ್ಟವೆನಿಸಲಿಲ್ಲ. ಇದರಿಂದ ಆತಿಥೇಯ ತಂಡದವರು ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಪಡೆದರು.ನೆಲಮಂಗಲದ ಬಳಿಯಿರುವ ಆದಿತ್ಯ ಗ್ಲೋಬಲ್ ಶಾಲೆಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದರೂ ಕನ್ನಡಿಗ ಶೇಖರ್ ನಾಯ್ಕ ನೇತೃತ್ವದ ಭಾರತ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು.

ಈ ಮೊತ್ತ ಭಾರತಕ್ಕೆ ಕಷ್ಟವೆನಿಸದ ರೀತಿಯಲ್ಲಿ ಪ್ರಕಾಶ್ ಜಯರಾಮಯ್ಯ ಬ್ಯಾಟ್ ಬೀಸಿದರು. ಬಿ-2 ವಿಭಾಗದ ಕರ್ನಾಟಕದ ಈ ಆಟಗಾರ ಕೇವಲ 49 ಎಸೆತಗಳಲ್ಲಿ 125 ರನ್ ಗಳಿಸಿ ಆತಿಥೇಯರ ಗೆಲುವನ್ನು ಸುಲಭಗೊಳಿಸಿದರು. ಇದರಲ್ಲಿ 27 ಬೌಂಡರಿಗಳು ಸೇರಿವೆ. ಭಾರತಕ್ಕೆ ಒಲಿದ ಹ್ಯಾಟ್ರಿಕ್ ಗೆಲುವು ಇದು. ಮೊದಲಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು.ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಪಾಕಿಸ್ತಾನ ಮಣಿಸಿತು. ಮಳೆ ಸುರಿದು ಕ್ರೀಡಾಂಗಣ ಹಸಿಯಾಗಿದ್ದ ಕಾರಣ ಪಂದ್ಯವನ್ನು ಒಂಬತ್ತು ಓವರ್‌ಗಳಿಗೆ ಸೀಮೀತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿ ಆಸೀಸ್ ನೀಡಿದ್ದ 61 ರನ್ ಗುರಿಯನ್ನು ಪಾಕ್ ಬ್ಯಾಟ್ಸ್‌ಮನ್‌ಗಳು ಕೇವಲ 12 ಎಸೆತಗಳಲ್ಲಿ ಚಚ್ಚಿ ಹಾಕಿದರು. ಈ ತಂಡ ಪಡೆದ ಸತತ ನಾಲ್ಕನೇ ಜಯ ಇದಾಗಿದೆ.ಪಂದ್ಯ ರದ್ದು: ಉದ್ಯಾನನಗರಿಯಲ್ಲಿ ಮಂಗಳವಾರ ಸತತ ಮಳೆ ಸುರಿದ ಕಾರಣ ಬುಧವಾರ ಬೆಳಿಗ್ಗೆ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣದ ಪಿಚ್ ಆಡಲು ಯೋಗ್ಯವಾಗಿರಲಿಲ್ಲ. ಆದ್ದರಿಂದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯವನ್ನು ರದ್ದು ಪಡಿಸಲಾಯಿತು. ಉಭಯ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು.ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157. (ಆರ್. ರಾಮರತನ್ ಔಟಾಗದೆ 48, ಶೇನ್ ಮೇಲ್ಸ್  40, ಅಂಥೋನಿ ಕಮಿನ್ಸ್ 24; ಎಸ್. ರವಿ 17ಕ್ಕೆ2). ಭಾರತ 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 162. (ಪ್ರಕಾಶ್ ಜಯರಾಮಯ್ಯ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry