ಭಾರತಕ್ಕೆ ಗೆಲುವು

7

ಭಾರತಕ್ಕೆ ಗೆಲುವು

Published:
Updated:

ಕ್ವಾಲಾಲಂಪುರ (ಐಎಎನ್‌ಎಸ್): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 18 ವರ್ಷ ವಯಸ್ಸಿನೊಳಗಿನವರ ಏಷ್ಯಾ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 60-59 ಪಾಯಿಂಟ್‌ಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು. ವಿಜಯೀ ತಂಡದ ಜೀನಾ ಸ್ಕಾರಿಯಾ (24 ಪಾಯಿಂಟ್ಸ್) ಉತ್ತಮ ಆಟ ಪ್ರದರ್ಶಿಸಿದರು.ಈ ಗೆಲುವಿನ ಮೂಲಕ ಭಾರತ ತಂಡ 2014 ರ ಟೂರ್ನಿಯಲ್ಲಿ `ಲೆವೆಲ್ 1~ ವಿಭಾಗದಲ್ಲಿ ಆಡಲು ಅರ್ಹತೆ ಪಡೆಯಿತು. ಭಾರತ 2008 ರಲ್ಲಿ ಕೊನೆಯದಾಗಿ `ಲೆವೆಲ್ 1~ ರಲ್ಲಿ ಆಡಿತ್ತು. ಆ ಬಳಿ ಸತತ ಎರಡು ಟೂರ್ನಿಗಳಲ್ಲಿ `ಲೆವೆಲ್ 2~ ರಲ್ಲಿ ಆಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry