ಶನಿವಾರ, ಮೇ 21, 2022
25 °C
ಕ್ರಿಕೆಟ್: ವಿಜಯ್ ಜೋಲ್ ಶತಕ

ಭಾರತಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾರ್ವಿನ್, ಆಸ್ಟ್ರೇಲಿಯಾ (ಪಿಟಿಐ): ನಾಯಕ ವಿಜಯ್ ಜೋಲ್ (128, 131 ಎಸೆತ) ಗಳಿಸಿದ ಶತಕ ಹಾಗೂ ಬೌಲರ್‌ಗಳ ಸಮರ್ಥ ದಾಳಿಯ ನೆರವಿನಿಂದ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡ ಇಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿತು.ಡಾರ್ವಿನ್‌ನ ಮರಾರಾ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 165 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 276 ರನ್ ಪೇರಿಸಿದರೆ, ಎದುರಾಳಿ ತಂಡ 42 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲೌಟಾಯಿತು.ಸಂಕ್ಷಿಪ್ತ ಸ್ಕೋರ್: ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 276 (ವಿಜಯ್ ಜೋಲ್ 128, ಅಖಿಲ್ ಹೆರ್ವಾಡ್ಕರ್ 55, ಕರ್ಟ್ಲಿ ವಾಟ್ಸನ್ 32ಕ್ಕೆ 2) ನ್ಯೂಜಿಲೆಂಡ್: 42 ಓವರ್‌ಗಳಲ್ಲಿ 111 (ಕೆನ್ ಮೆಕ್‌ಲ್ಯೂರ್ 41, ಕುಲ್‌ದೀಪ್ ಯಾದವ್ 22ಕ್ಕೆ 3, ಚಾಮಾ ಮಿಲಿಂದ್ 16ಕ್ಕೆ 2, ಅಭಿಮನ್ಯು ಲಂಬಾ 21ಕ್ಕೆ 2) ಫಲಿತಾಂಶ: ಭಾರತ ತಂಡಕ್ಕೆ 165 ರನ್ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.