ಭಾರತಕ್ಕೆ ಜಯ

7
ಸ್ಯಾಫ್ ಫುಟ್‌ಬಾಲ್

ಭಾರತಕ್ಕೆ ಜಯ

Published:
Updated:

ಕಠ್ಮಂಡು (ಪಿಟಿಐ): ಹಾಲಿ ಚಾಂಪಿಯನ್ ಭಾರತ ತಂಡ ಸುಧಾರಿತ ಪ್ರದರ್ಶನ ನೀಡಲು ವಿಫಲವಾದರೂ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 1-0 ಗೋಲಿನ ಗೆಲುವು ಪಡೆಯಿತು.ಭಾನುವಾರ ನಡೆದ ಪಂದ್ಯದ 14ನೇ ನಿಮಿಷದಲ್ಲಿ ಪಾಕಿಸ್ತಾನ ತಂಡದ ನಾಯಕ ಸಮರ್ ಇಶಾಕ್ ನೀಡಿದ `ಉಡುಗೊರೆ' ಗೋಲು ಭಾರತದ ಗೆಲುವಿಗೆ ಕಾರಣವಾಯಿತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲಿದೆ.ಈ ಪಂದ್ಯ ಪಾಕಿಸ್ತಾನದ ಡಿಫೆಂಡರ್ ಜೆಶ್ ರಹ್ಮಾನ್ ಹಾಗೂ ಸ್ಟ್ರೈಕರ್ ಚೆಟ್ರಿ ನಡುವಿನ ಹೋರಾಟ ಎಂದೇ ಸುದ್ದಿಯಾಗಿತ್ತು. ಆದರೆ ಇಬ್ಬರು ಆಟಗಾರರೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.ಪಂದ್ಯದ ಏಕೈಕ ಗೋಲು 14ನೇ ನಿಮಿಷದಲ್ಲಿ ಬಂತು. ಭಾರತದ ನಿರ್ಮಲ್ ಚೆಟ್ರಿ ಎದುರಾಳಿ ಗೋಲು ಆವರಣದತ್ತ ಚೆಂಡಿನೊಂದಿಗೆ ಮುನ್ನುಗಿದರು. ಪಾಕ್ ತಂಡದ ಸಮರ್ ಅವರು ಚೆಟ್ರಿಗೆ ತಡೆಯೊಡ್ಡಲು ಪ್ರಯತ್ನಿಸಿದರು. ಆದರೆ ಚೆಂಡನ್ನು ದೂರಕ್ಕೆ ಅಟ್ಟುವ ಬದಲು ತಮ್ಮದೇ ನೆಟ್‌ನೊಳಕ್ಕೆ ತಳ್ಳಿದರು. ಇದರಿಂದ ಭಾರತಕ್ಕೆ ಮುನ್ನಡೆ ಪಡೆಯಿತು. ಆ ಬಳಿಕ ಗೋಲುಗಳು ಬರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry