ಮಂಗಳವಾರ, ಮಾರ್ಚ್ 9, 2021
18 °C

ಭಾರತಕ್ಕೆ ದಾಖಲೆಯ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ದಾಖಲೆಯ ಜಯ

ಅಡಿಲೇಡ್‌ (ಪಿಟಿಐ):  ಭಾರತದ ವನಿತೆ ಯರು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ 5 ವಿಕೆಟ್‌ಗಳ ದಾಖಲೆಯ ಗೆಲುವು ಪಡೆದಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ತಮ್ಮದಾಗಿಸಿಕೊಂಡಿದ್ದಾರೆ.ಅಡಿಲೇಡ್‌ ಓವಲ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆಯ್ದು ಕೊಂಡಿತು. ಆತಿಥೇಯ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 ರನ್‌ಗಳಿಗೆ ಆಲೌಟ್‌ ಆಯಿತು. ಈ ಗುರಿಯನ್ನು ಮಿಥಾಲಿ ರಾಜ್‌ ಪಡೆ 18.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು. ಇದ ರೊಂದಿಗೆ ಕಾಂಗರೂ ಗಳ ನಾಡಿನ ತಂಡದ ಎದುರು ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಗಳಿಸಿದ ದಾಖಲೆ ಮಾಡಿತು.ಆರಂಭಿಕ ಸಂಕಷ್ಟ:   ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಈ ತಂಡ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಗ್ರೇಸ್‌ ಹ್ಯಾರಿಸ್‌ (0) ವಿಕೆಟ್‌ ಕಳೆದುಕೊಂಡಿತು.  ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಆರಂಭಿಕ ಆಘಾತಕ್ಕೊಳ ಗಾದರು. ನಾಯಕಿ ಮಿಥಾಲಿ  ರಾಜ್‌ (4) ದೊಡ್ಡ ಹೊಡೆತಕ್ಕೆ ಮುಂದಾಗಿ ಕೈ ಸುಟ್ಟುಕೊಂಡರು. ಆದರೆ ಸ್ಮೃತಿ ಮಂದಾನ (29; 25ಎ, 3ಬೌಂ, 1ಸಿ) ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ (35; 32ಎ, 5ಬೌಂ) ದಿಟ್ಟ ಆಟ ಆಡಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಬಳಿಕ ಹರ್ಮನ್‌ಪ್ರೀತ್‌ ಕೌರ್ (46; 31ಎ, 6ಬೌಂ, 1ಸಿ) ಆತಿಥೇಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 (ಬೆತ್‌ ಮೂನಿ 36,  ಅಲೆಕ್ಸ್‌ ಬ್ಲಾಕ್‌ವುಡ್‌ ಔಟಾಗದೆ 27, ಅಲಿಸ್ಸಾ ಹೀಲಿ ಔಟಾಗದೆ 41; ಪೂನಮ್‌ ಯಾದವ್‌ 26ಕ್ಕೆ2, ಅನುಜಾ ಪಾಟೀಲ 16ಕ್ಕೆ1, ಶಿಖಾ ಪಾಂಡೆ 18ಕ್ಕೆ1). ಭಾರತ: 18.4 ಓವರ್‌ಗಳಲ್ಲಿ  5 ವಿಕೆಟ್‌ಗೆ 141 (ವೇದಾ ಕೃಷ್ಣಮೂರ್ತಿ 35, ಹರ್ಮನ್‌ಪ್ರೀತ್‌ ಕೌರ್‌ 46, ಅನುಜಾ ಪಾಟೀಲ್‌ ಔಟಾಗದೆ 14; ಮೇಗನ್‌ ಶುಟ್‌ 23ಕ್ಕೆ2, ಜೆಸ್‌ ಜೊನಾಸೆನ್‌ 24ಕ್ಕೆ2). ಫಲಿತಾಂಶ:  ಭಾರತಕ್ಕೆ 5 ವಿಕೆಟ್‌ ಜಯ ಹಾಗೂ 3 ಪಂದ್ಯಗಳ ಸರಣಿಯಲ್ಲಿ 1–0   ಮುನ್ನಡೆ.ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್‌ ಕೌರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.