ಭಾರತಕ್ಕೆ ಧೈರ್ಯವಿಲ್ಲ-ಪಾಕಿಸ್ತಾನ ಲೇವಡಿ

7

ಭಾರತಕ್ಕೆ ಧೈರ್ಯವಿಲ್ಲ-ಪಾಕಿಸ್ತಾನ ಲೇವಡಿ

Published:
Updated:

ಇಸ್ಲಾಮಾಬಾದ್ (ಪಿಟಿಐ): ಹಿಂದೂ ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಭಾರತಕ್ಕೆ ಇಲ್ಲ ಎಂದು ಪಾಕಿಸ್ತಾನ ಕೆಣಕಿದೆ.ಥಿಂಪುವಿನಲ್ಲಿ ಭಾನುವಾರ ಆರಂಭವಾಗಲಿರುವ ಉಭಯ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೂ ಮುಂಚೆ ಪಾಕ್‌ನಿಂದ ಈ ಪ್ರಚೋದಕ ಹೇಳಿಕೆ ಹೊರಬಿದ್ದಿದೆ. 2007ರಲ್ಲಿ ಸಮ್‌ಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣವನ್ನು ಭಾರತ ನಿಭಾಯಿಸಿದ ರೀತಿ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಹಿಂದೂ ಭಯೋತ್ಪಾದಕರು ಮತ್ತು ಅವರು ಅಕ್ರಮವಾಗಿ ಸಂಬಂಧ ಹೊಂದಿದ್ದ ಭಾರತೀಯ ಸೇನೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಭಾರತಕ್ಕೆ ಇಲ್ಲ ಎಂದು ಪಾಕ್ ಚುಚ್ಚಿದೆ.42 ಪಾಕ್ ಪ್ರಜೆಗಳನ್ನು ಬಲಿ ಪಡೆದ ಸಮ್‌ಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ ತನಿಖೆ ನಡೆಸಿದ ಭಾರತ ಕ್ರಮ ಹೆಚು ಆಶಾದಾಯಕವಾಗಿಲ್ಲ ಎಂದು ಹೇಳಿರುವ ವಿದೇಶಾಂಗ ಇಲಾಖೆಯ ವಕ್ತಾರ ಅಬ್ದುಲ್ ಬಸಿತ್, ಭಾರತದ ನುಡಿ ಮತ್ತು ನಡೆಯಲ್ಲಿ ಸಾಕಷ್ಟು ಅಂತರವಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry