ಭಾರತಕ್ಕೆ ಬಂಗಾರ

ಬುಧವಾರ, ಜೂಲೈ 17, 2019
27 °C
ವಿಶ್ವಕಪ್ ಆರ್ಚರಿ: ಮಿಂಚಿದ ದೀಪಿಕಾ

ಭಾರತಕ್ಕೆ ಬಂಗಾರ

Published:
Updated:

ಕೋಲ್ಕತ್ತ (ಪಿಟಿಐ): ಭಾರತದ ಸ್ಪರ್ಧಿಗಳು ಕೊಲಂಬಿಯದ ಮೆಡೆಲಿನ್‌ನಲ್ಲಿ ನಡೆದ ವಿಶ್ವಕಪ್ ಆರ್ಚರಿ `ಸ್ಟೇಜ್-3' ಟೂರ್ನಿಯ ರಿಕರ್ವ್ ಸ್ಪರ್ಧೆಯ ಮಹಿಳೆಯರ ತಂಡ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ.

ಈ ಟೂರ್ನಿಯಲ್ಲಿ ಭಾರತ ಒಟ್ಟು ಮೂರು ಪದಕಗಳೊಂದಿಗೆ (ಒಂದು ಬಂಗಾರ ಹಾಗೂ ಎರಡು ಕಂಚು) ನಾಲ್ಕನೇ ಸ್ಥಾನ ಪಡೆದಿದೆ.ಭಾನುವಾರ ನಡೆದ ಫೈನಲ್‌ನಲ್ಲಿ ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬ್ಯಾಲ ದೇವಿ ಹಾಗೂ ರಿಮಿಲ್ ಬರಿಯುಲಿ ಅವರನ್ನು ಒಳಗೊಂಡ ಭಾರತದ 201-186ರಲ್ಲಿ ಚೀನಾವನ್ನು ಮಣಿಸಿ ಈ ಸಾಧನೆ ಮಾಡಿತು. ಬಲವಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ದೀಪಿಕಾ ಕುಮಾರಿ ತೋರಿದ ನಿಖರ ಪ್ರದರ್ಶನ ಭಾರತಕ್ಕೆ ಚಿನ್ನ ಜಯಿಸಲು ಸಹಕಾರಿಯಾಯಿತು.

ಟೂರ್ನಿಯ ರಿಕರ್ವ್ ಮಿಶ್ರ ತಂಡ ವಿಭಾಗದಲ್ಲೂ ಭಾರತ ಕಂಚು ಗೆದ್ದಿತು. ದೀಪಿಕಾ ಕುಮಾರಿ ಹಾಗೂ ಅತಾನು ದಾಸ್ 150-132ರಲ್ಲಿ ಮೆಕ್ಸಿಕೊ ಸ್ಪರ್ಧಿಗಳ ವಿರುದ್ಧ ಜಯಿಸಿದರು.ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಕಂಡ ಭಾರತ ತಂಡ, ಮೊದಲ ಸೆಟ್‌ನಲ್ಲಿ 46-33ರಲ್ಲಿ ಮುನ್ನಡೆ ಪಡೆಯಿತು. ಎರಡನೇ ಸೆಟ್‌ನಲ್ಲಿ ಎದುರಾಳಿ ಚೀನಾ ಪ್ರಬಲ ಪೈಪೋಟಿ ಒಡ್ಡಿತಾದರೂ ಭಾರತ ಮುನ್ನಡೆಯನ್ನು 97-84ಕ್ಕೆ ಹೆಚ್ಚಿಸಿಕೊಂಡಿತು.ಮೂರನೇ ಸೆಟ್‌ನಲ್ಲಿ ಉಭಯ ತಂಡಗಳು 50-50 ಪಾಯಿಂಟ್ ಗಳಿಸಿದವು. ಆದರೆ ಹಿಂದಿನ ಸೆಟ್‌ನಲ್ಲಿದ್ದ ಮುನ್ನಡೆ ನೆರವಿನ ಜೊತೆಗೆ ಭಾರತ ನಿರ್ಣಾಯಕ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿ 201-186 ರಲ್ಲಿ ಬಂಗಾರ ಗೆದ್ದಿತು.

ಪ್ಯಾರಿಸ್‌ನಲ್ಲಿ ನಡೆಯಲಿರುವ ಆರ್ಚರಿ ವಿಶ್ವಕಪ್‌ಗೂ ಮುನ್ನ ಹಾಲೆಂಡ್‌ನಲ್ಲಿ ಆಗಸ್ಟ್ 19ರಿಂದ 25ರವರೆಗೆ ವಿಶ್ವಕಪ್ ಆರ್ಚರಿಯ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry