ಭಾರತಕ್ಕೆ ಮತ್ತೊಂದು ಸೋಲು

7
ಹಾಕಿ ವಿಶ್ವ ಲೀಗ್‌ ಫೈನಲ್ಸ್‌

ಭಾರತಕ್ಕೆ ಮತ್ತೊಂದು ಸೋಲು

Published:
Updated:

ನವದೆಹಲಿ (ಪಿಟಿಐ/ಐಎಎನ್‌ ಎಸ್): ಮೊದಲ ಪಂದ್ಯದಲ್ಲಿ ಅನುಭ ವಿಸಿದ್ದ ನಿರಾಸೆಯ ನೆನಪು ಹಸಿರಾ ಗಿರುವಾಗಲೇ ಭಾರತ ತಂಡಕ್ಕೆ ಹಾಕಿ ವಿಶ್ವ ಲೀಗ್‌ ಫೈನಲ್‌ ಟೂರ್ನಿಯಲ್ಲಿ ಮತ್ತೊಂದು ಸೋಲು ಕಾಡಿತು.ಮೇಜರ್ ಧ್ಯಾನಚಂದ್‌  ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯರು 1–3 ಗೋಲುಗಳಿಂದ ನ್ಯೂಜಿಲೆಂಡ್‌ ಎದುರು ಸೋಲು ಕಂಡರು. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ನಿರಾಸೆ ಅನುಭವಿಸಿತ್ತು.ವಿಜಯೀ ತಂಡದ ಶೇಯಾ ಮೆಕಾಲೆಸ್ಸೆ ಮೊದಲ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಸ್ಟೀಫನ್‌ ಜೆನ್ನಿಸ್‌ 40 ಮತ್ತು 50ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಭಾರತದ  ಮನ್‌ದೀಪ್‌ ಸಿಂಗ್‌ ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.ವಿಶ್ವ ರ್‍ಯಾಂಕ್‌ನಲ್ಲಿ ಏಳನೇ ಸ್ಥಾನ ಹೊಂದಿರುವ ನ್ಯೂಜಿಲೆಂಡ್‌ ತಂಡ ಚುರುಕಿನ ಪ್ರದರ್ಶನ ತೋರಿತು.  ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಎದುರಾಳಿ ತಂಡ ಗೋಲು ಗಳಿಸುವ ಕೆಲ ಅವಕಾಶಗಳನ್ನು ತಡೆದರು. ರ್‍ಯಾಂಭಾರತದ ಬೀರೇಂದ್ರ ಲಾಕ್ರಾ ಮತ್ತು ನಿಕಿನ್‌ ತಿಮ್ಮಯ್ಯ ಅವರಿಗೂ ಗೋಲು ಗಳಿಸಲು ಕೆಲ ಅವಕಾಶಗಳು ಲಭಿಸಿದ್ದವು. ಆದರೆ, ನ್ಯೂಜಿಲೆಂಡ್‌ ತಂಡದ ಭದ್ರ ರಕ್ಷಣಾ ಕೋಟೆಯನ್ನು ಭೇದಿಸಲು ಅವರಿಗೆ ಸಾಧ್ಯವಾಗಲಿಲ್ಲ.ದಿನದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 2–1 ಗೋಲುಗಳಿಂದ ಜರ್ಮನಿ ಎದುರು ಗೆಲುವು ಸಾಧಿಸಿತು. ಸೋಮವಾರ ನಡೆಯಲಿರುವ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ಎದುರು ಪೈಪೋಟಿ ನಡೆಸಲಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry