ಭಾರತಕ್ಕೆ ವಿಶ್ವಕಪ್; ಜನತೆಗೆ ಐಸ್ ಕ್ರೀಂ ಕಪ್

7

ಭಾರತಕ್ಕೆ ವಿಶ್ವಕಪ್; ಜನತೆಗೆ ಐಸ್ ಕ್ರೀಂ ಕಪ್

Published:
Updated:
ಭಾರತಕ್ಕೆ ವಿಶ್ವಕಪ್; ಜನತೆಗೆ ಐಸ್ ಕ್ರೀಂ ಕಪ್

ಪುತ್ತೂರು: ಮಹೇಂದ್ರಸಿಂಗ್ ದೋನಿ ನೇತೃತ್ವದ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದುಕೊಂಡ ಹಿನ್ನೆಲೆಯಲ್ಲಿ ಎಸ್‌ಡಿಪಿ ಕಾರ್ಯಕರ್ತರು  ಸೋಮವಾರ ಪುತ್ತೂರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿ ಜನತೆಗೆ ಐಸ್‌ಕ್ರೀಂ ಕಪ್ ವಿತರಿಸಿದರು.ಎಸ್‌ಡಿಪಿಐ ಕಾರ್ಯಕರ್ತರು 111ಅಡಿ ಉದ್ದ  ಮತ್ತು 6ಅಡಿ ಅಗಲದ ಬೃಹತ್ ಗಾತ್ರದ  ರಾಷ್ಟ್ರ ಧ್ವಜದೊಂದಿಗೆ ಪುತ್ತೂರಿನ ದರ್ಬೆ ವೃತ್ತದ ಬಳಿಯಿಂದ ಬೊಳುವಾರಿನ ವರೆಗೆ ಮುಖ್ಯ  ರಸ್ತೆಯಲ್ಲಿ  ಮೆರವಣಿಗೆ ನಡೆಸಿದರು.  ರಸ್ತೆಯುದ್ದಕ್ಕೂ ನೆರೆದ ಮತ್ತು ಪೇಟೆಯಲ್ಲಿದ್ದ ಸುಮಾರು 4ಸಾವಿರದಷ್ಟು ಮಂದಿಗೆ ಐಸ್ ಕ್ರೀಂ ಕಪ್ ವಿತರಿಸಿ ಸಂಭ್ರಮಿಸಿದರು. ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ವಿಜಯೋತ್ಸವ ಮೆರವಣಿಗೆಗೆ ಪುತ್ತೂರಿನ ದರ್ಬೆ ವೃತ್ತದ ಬಳಿ ಚಾಲನೆ ನೀಡಿದರು. ರಾಜ್ಯ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಅವರು ಭಾರತ ತಂಡವು ಕ್ರಿಕೆಟ್‌ನಲ್ಲಿ ಗಳಿಸಿದ  ವಿಜಯ ದೇಶದ 121 ಕೋಟಿ ಭಾರತೀಯರ ವಿಜಯವಾಗಿದೆ ಎಂದರು.   ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯರಾದ ವಕೀಲ ಮಜೀದ್ ಖಾನ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಕೂರ್ನಡ್ಕ, ಮುಖಂಡರಾದ ಅಶ್ರಫ್ ಬಾವು ಪಡೀಲು, ರಿಝ್ವಾನ್, ಕೆ.ಎಚ್.ಖಾಸಿಂ, ರಾಮಣ್ಣ ರೈ, ಜುನೈದ್ ಸಾಲ್ಮರ,  ಸಮೀರ್ ಪರ್ಲಡ್ಕ, ಮೂಸಕುಂಞಿ ಅರಿಯಡ್ಕ, ಉಮ್ಮರ್ ಕೂರ್ನಡ್ಕ, ದೀನಾರ್ ಫಾರೂಕ್ ಸಂಪ್ಯ, ಜೈನುದ್ದೀನ್ ಪರ್ಲಡ್ಕ, ಉಮ್ಮರ್ ಕೂರ್ನಡ್ಕ, ರಹೀಂ ನೇರಳಕಟ್ಟೆ,  ಉಮೇಶ್ ಮುಗೇರ, ನಸೀರ್ ಸಂಪ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry