ಶನಿವಾರ, ಮೇ 21, 2022
25 °C

ಭಾರತಕ್ಕೆ ಸುನಾಮಿ ಅಪಾಯ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಐಎಎನ್ಎಸ್): ಜಪಾನಿನಲ್ಲಿ ಶುಕ್ರವಾರ 8.9 ತೀವ್ರತೆಯ ವಿನಾಶಕಾರಿ ಭೂಕಂಪ ಸಂಭವಿಸಿದ್ದು, ಜಪಾನ್ ಹಾಗೂ ಸುತ್ತಮುತ್ತಲ ದ್ವೀಪಗಳು ಸುನಾಮಿಯಿಂದ ತತ್ತರಿಸಿವೆ. 20 ರಾಷ್ಟ್ರಗಳು ಸೇರಿದಂತೆ ಹಲವು ದ್ವೀಪಗಳಿಗೆ ಸುನಾಮಿ ಅಪ್ಪಳಿಸಲಿದೆ ಎಂದು ಮುನ್ನಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. ಆದರೆ ಇದರಿಂದ ಭಾರತಕ್ಕೆ ಯಾವುದೆ ಅಪಾಯ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಶೈಲೇಶ್ ನಾಯಕ್ ಅವರು ಭಾರತಕ್ಕೆ ಇದರಿಂದ ಅಪಾಯ ಇಲ್ಲ ಜನರು ಅನಾವಶ್ಯಕವಾಗಿ ಭಯಪಡಬೇಕಾಗಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸುನಾಮಿ ಮುನ್ನಚ್ಚರಿಕೆಯನ್ನು ಪೂರ್ವ ಏಷ್ಯಾ ರಾಷ್ಟ್ರಗಳಿಗೆ ನೀಡಲಾಗಿದೆಯೇ ಹೊರತು ಭಾರತಕ್ಕೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಮಾಹಿತಿಯಗಳನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.