ಭಾರತಕ್ಕೆ ಹಿಂದಿರುಗಲು ಭಯ

7

ಭಾರತಕ್ಕೆ ಹಿಂದಿರುಗಲು ಭಯ

Published:
Updated:

ಲಂಡನ್ (ಪಿಟಿಐ): ‘ಒಂದು ವೇಳೆ ಬಲವಂತವಾಗಿ ನನ್ನನ್ನು ಭಾರತಕ್ಕೆ ಹಿಂದಿರುಗುವಂತೆ ಮಾಡಿದರೆ, ನನಗೆ  ಮತ್ತು ಮಗನಿಗೆ ಮುಂದೇನಾಗುವುದೋ ಎಂಬ ಭಯ ತೀವ್ರವಾಗಿ ಕಾಡುತ್ತಿದೆ’.-ಇದು ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ಗೆ ಭಾರತಕ್ಕೆ ವಾಪಸ್ ಕರೆಸಿಕೊಂಡ ರಾಜತಾಂತ್ರಿಕ ಅಧಿಕಾರಿ ಅನಿಲ್ ವರ್ಮಾ ಅವರ ಪತ್ನಿ ಪರೊಮಿತಾ ವರ್ಮಾ ನೀಡಿರುವ ಹೇಳಿಕೆ.ಕಳೆದ ಡಿಸೆಂಬರ್‌ನಲ್ಲಿ ಪತಿ ಅನಿಲ್ ವರ್ಮಾ ಅವರು ತಮ್ಮ ಮೇಲೆ ನಡೆಸಿರುವ ಹಲ್ಲೆಯನ್ನು ದೂರಿನಲ್ಲಿ ಉಲ್ಲೇಖಿಸಿರುವ ಪರೊಮಿತಾ, ‘ಅನಿಲ್ ಕೊಟ್ಟ ಏಟಿನಿಂದ ಮುಖದಲ್ಲಿ ರಕ್ತಸ್ರಾವ ಉಂಟಾಗಿತ್ತು’ ಎಂದು ಹೇಳಿದ್ದಾರೆ.ಆದರೆ, ಪ್ರಕರಣದ ತನಿಖೆ ನಡೆಸಿರುವ  ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಗಳು ‘ಪರೊಮಿತಾ ಮುಖದಲ್ಲಿ ಅಲ್ಪ ಪ್ರಮಾಣದ ಗಾಯಗಳಾಗಿತ್ತು’ ಎಂದು ಹೇಳಿದ್ದಾರೆ.ಲಂಡನ್‌ಗೆ ಆಗಮಿಸುವುದಕ್ಕಿಂತ ಮೊದಲು 2008ರಲ್ಲಿ ದೆಹಲಿಯಲ್ಲಿ, ನಂತರ 2009ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಲಂಡನ್‌ನಲ್ಲಿ ಅನಿಲ್ ತಮಗೆ ದೈಹಿಕ ಹಿಂಸೆ ನೀಡಿದ್ದರು ಎಂದೂ ಪರೊಮಿತಾ ದೂರಿನಲ್ಲಿ ತಿಳಿಸಿದ್ದಾರೆ.ವಾರಾಣಸಿಯಲ್ಲಿರುವ ತಮ್ಮ ಬಂಧುಗಳ ಮನೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಅನಿಲ್ ವರ್ಮಾ ತಂದೆ ಕೂಡ ಹಲ್ಲೆ ನಡೆಸಿದ್ದರು ಎಂದು ಅವರು ದೂರಿದ್ದಾರೆ.‘ತಮ್ಮ ಮಗ ‘ಉದರ ಉಬ್ಬುವ ರೋಗ’ದಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಎಲ್ಲಾ ಬೆಳವಣಿಗೆಗಳಿಂದ ಆತ ಆಘಾತಗೊಂಡಿದ್ದಾನೆ’ ಎಂದು ಪರೊಮಿತಾ ತಿಳಿಸಿದ್ದಾರೆ.ಅನಿರ್ದಿಷ್ಟಾವಧಿ ಕಾಲ ಲಂಡನ್‌ನಲ್ಲೇ ಉಳಿಯಲು ಬಯಸಿರುವ ಪರೊಮಿತಾ, ವರ್ಮಾ ಅವರು ಮಗನ ಸಮೀಪಕ್ಕೆ ಬರುವುದರ ವಿರುದ್ಧ ‘ಲೈಂಗಿಕ-ಕಿರುಕುಳ ತಡೆ’ ಆದೇಶವನ್ನು ಏಕಪಕ್ಷೀಯವಾಗಿ ಪಡೆದಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಎರಡು ವಾರಗಳಲ್ಲಿ ನಡೆಯುವ ಸಾಧ್ಯತೆ ಇದೆ.ಕೇಂದ್ರ ಸರ್ಕಾರದ ಆದೇಶದಂತೆ ರಾಜತಂತ್ರಿಕ ಅಧಿಕಾರಿ ಅನಿಲ್ ವರ್ಮಾ ಜನವರಿ 21ರಂದು ಲಂಡನ್‌ನಿಂದ ಭಾರತಕ್ಕೆ ವಾಪಸಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry