ಗುರುವಾರ , ಫೆಬ್ರವರಿ 25, 2021
29 °C

ಭಾರತಕ್ಕೆ ಹೆಚ್ಚಿನ ಮತದಾನ ಹಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಹೆಚ್ಚಿನ ಮತದಾನ ಹಕ್ಕು

ವಾಷಿಂಗ್ಟನ್‌ (ಪಿಟಿಐ):  ಅಂತರ ರಾಷ್ಟ್ರೀಯ ಹಣಕಾಸು ನಿಧಿಯು  (ಐಎಂಎಫ್‌), ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ  ಆಡಳಿತ  ಮೀಸಲು  ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದು,  ಭಾರತ ಸೇರಿದಂತೆ ನಾಲ್ಕು ದೇಶಗಳು ಹೆಚ್ಚು ಮತದಾನದ ಹಕ್ಕು ಪಡೆಯಲಿವೆ.ಪ್ರವರ್ಧಮಾನಕ್ಕೆ ಬರುತ್ತಿರುವ  ಭಾರತ, ಚೀನಾ, ಬ್ರೆಜಿಲ್‌ ಮತ್ತು ರಷ್ಯಾ ದೇಶಗಳು  ಇದೇ ಮೊದಲ ಬಾರಿಗೆ ‘ಐಎಂಎಫ್‌’ನ  10 ಅತಿದೊಡ್ಡ ಸದಸ್ಯ ರಾಷ್ಟ್ರಗಳಾಗಲಿವೆ. ‘ಐಎಂಎಫ್‌’ನಲ್ಲಿ ತನ್ನ ಹಿಡಿತ ಸಡಿಲಾಗಬಹುದು ಎಂಬ ಕಾರಣಕ್ಕೆ ಮೀಸಲು ಸುಧಾರಣಾ ಕ್ರಮಗಳ ಜಾರಿಗೆ ಅಮೆರಿಕವು ವಿರೋಧಿಸುತ್ತ ಬಂದಿತ್ತು. ಕಳೆದ ತಿಂಗಳಷ್ಟೇ ಕೆಲ ನಿಬಂಧನೆ ಗಳನ್ನು ವಿಧಿಸಿ ಮೀಸಲು ಸುಧಾರಣಾ ಕ್ರಮಗಳಿಗೆ ಅಮೆರಿಕದ ಕಾಂಗ್ರೆಸ್‌  ಅನುಮೋದನೆ ನೀಡಿತ್ತು.ಈ ಸುಧಾರಣಾ ಕ್ರಮವು ‘ಐಎಂಎಫ್‌’ನ ಆಡಳಿತ ಮತ್ತು ಶಾಶ್ವತ ನಿಧಿ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಇದು ನಿಧಿಯ ಹಣಕಾಸು ಸಾಮರ್ಥ್ಯವನ್ನೂ ಹೆಚ್ಚಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಟ್ಟು 188 ಸದಸ್ಯ ದೇಶಗಳ ‘ಐಎಂಎಫ್‌’ನಲ್ಲಿ ಭಾರತದ ಪಾಲು ಈಗ ಶೇ 2.44ರಿಂದ ಶೇ 2.75ಕ್ಕೆ ಹೆಚ್ಚಲಿದೆ.     

  ಪಾಲು ಬಂಡವಾಳದ ರೂಪದಲ್ಲಿ ಭಾರತದ ಸ್ಥಾನಮಾನವು ಈಗ 11ನೆ ಸ್ಥಾನದಿಂದ 8ನೆ ಸ್ಥಾನಕ್ಕೆ ಏರಿಕೆಯಾಗ ಲಿದೆ. ಹತ್ತು ಮುಂಚೂಣಿ ದೇಶಗಳ ಪೈಕಿ ಅಮೆರಿಕ, ಜಪಾನ್‌, ಫ್ರಾನ್ಸ್‌, ಜರ್ಮನಿ, ಇಟಲಿ ಮತ್ತು ಇಂಗ್ಲೆಂಡ್‌ ಇವೆ.‘ತ್ವರಿತವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ಸದಸ್ಯ ದೇಶಗಳ ಅಗತ್ಯಗಳನ್ನು ಸಕಾಲಕ್ಕೆ ಪೂರ್ಣಗೊಳಿಸಲು ಹೆಚ್ಚು ಪ್ರಾತಿನಿಧಿಕ ವಾದ ಮತ್ತು ಆಧುನಿಕ ಸ್ವರೂಪದ ಈ ಸುಧಾರಣಾ ಕ್ರಮಗಳು  ನೆರವಾಗಲಿವೆ’  ಎಂದು ‘ಐಎಂಎಫ್‌’ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್‌ ಲಗಾರ್ಡ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.