ಗುರುವಾರ , ಮೇ 13, 2021
35 °C

ಭಾರತದಲ್ಲಿನ ಪಾಕಿಸ್ತಾನದ ಹೈ ಕಮಿಷನರ್ ಆಗಿ ಸಲ್ಮಾನ್ ಬಷೀರ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ 26/11 ದಾಳಿಗೆ ಸಂಬಂಧಿಸಿದಂತೆ ಭಾರತ-ಪಾಕ್ ನಡುವಿನ ಮಾತುಕತೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಬಷೀರ್ ಅವರು ಭಾರತದಲ್ಲಿನ ಪಾಕಿಸ್ತಾನದ ನೂತನ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.

ಶಾಹಿದ್ ಮಲಿಕ್ ಅವರ ಸ್ಥಾನವನ್ನು 60 ವರ್ಷ ವಯಸ್ಸಿನ ಬಷೀರ್ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಅಜ್ಜಮ್ ಅಹಮದ್ ಖಾನ್ ಅವರು ಶನಿವಾರ ಪ್ರಕಟಿಸಿದರು.

ಸಲ್ಮಾನ್ ಬಷೀರ್ ಅವರು ಡೆನ್ಮಾರ್ಕ್, ಲುಥಾನಿಯಾ, ಚೀನಾ ಹಾಗೂ ಮಂಗೋಲಿಯಾದ ರಾಯಭಾರಿಯಾಗಿ ಅನುಭವ ಹೊಂದಿದ್ದಾರೆ. ಜಿನೇವಾದಲ್ಲಿರುವ ವಿಶ್ವಸಂಸ್ಥೆಗೆ ಪಾಕಿಸ್ತಾನದ ಕಾರ್ಯಾಚರಣೆಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದಾರೆ. ಏಪ್ರಿಲ್ 8ರಂದು ಭಾರತಕ್ಕೆ ಒಂದು ದಿನದ ಖಾಸಗಿ ಭೇಟಿ ನೀಡಿದ್ದ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ಭಾರತಕ್ಕೆ ಬಂದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.