ಭಾರತದಲ್ಲಿ ಇನ್ನೂ ಮಲೇರಿಯಾ ಕಾಟ

7

ಭಾರತದಲ್ಲಿ ಇನ್ನೂ ಮಲೇರಿಯಾ ಕಾಟ

Published:
Updated:

ವಾಷಿಂಗ್ಟನ್(ಪಿಟಿಐ): ಕಳೆದ ಒಂದು ದಶಕದಲ್ಲಿ ಜಗತ್ತಿನಾದ್ಯಂತ ಮಲೇರಿಯಾದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಶೇ 20ರಷ್ಟು ಇಳಿಕೆ ಕಂಡು ಬಂದಿದೆ. ಆದರೆ, ಭಾರತದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. 2006ರಲ್ಲಿ ಇಳಿಮುಖವಾಗಿದ್ದ ಮಲೇರಿಯಾ ಪ್ರಕರಣಗಳು 2009ರಲ್ಲಿ ಏರಿಕೆಯಾಗಿದ್ದು, 1,100 ಜನ ಸಾವಿಗೀಡಾಗಿದ್ದಾರೆ.2009ರಲ್ಲಿ ಭಾರತದಲ್ಲಿ 15 ಲಕ್ಷ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ 1,133 ಜನ ಸಾವನ್ನಪ್ಪಿದ್ದರು ಎಂಬ ಅಂಶ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ `ವಿಶ್ವ ಮಲೇರಿಯಾ ವರದಿ- 2010~ರಲ್ಲಿ ಉಲ್ಲೇಖಿಸಲಾಗಿದೆ.

 

2007ರಿಂದ ಭಾರತದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಲ್ಲದೇ 2009ರ ವೇಳೆಗೆ ಮಲೇರಿಯಾದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2000ದಲ್ಲಿ 892 ಜನ ಮೃತಪಟ್ಟಿದ್ದರು.

 

2006ರಲ್ಲಿ ಈ ಸಂಖ್ಯೆ 1,708ಕ್ಕೆ ತಲುಪಿತ್ತು. ವಿಶ್ವ ಆರೋಗ್ಯ ಸಂಘಟನೆಯು 1955ರಲ್ಲಿ ಜಗತ್ತಿನಾದ್ಯಂತ ಮಲೇರಿಯಾ ನಿರ್ಮೂಲನಾ ಅಭಿಯಾನ ನಡೆಸಿತ್ತು. ಇದರಿಂದಾಗಿ 16 ದೇಶಗಳನ್ನು ಮಲೇರಿಯಾ ಮುಕ್ತ ದೇಶವೆಂದು ಘೋಷಿಸಲಾಯಿತು..1987ರಲ್ಲಿ ಮತ್ತೆ ಎಂಟು ರಾಷ್ಟ್ರಗಳನ್ನು ಮಲೇರಿಯಾ ಮುಕ್ತ ದೇಶಗಳೆಂದು ಘೋಷಿಸಿ ಪ್ರಮಾಣ ಪತ್ರ ನೀಡಲಾಯಿತು.  2015ರ ವೇಳೆಗೆ ಯೂರೋಪ್ ಖಂಡದ 8ರಿಂದ 10 ರಾಷ್ಟ್ರಗಳನ್ನು ಮಲೇರಿಯಾ ಮುಕ್ತ ದೇಶಗಳೆಂದು ಘೋಷಿಸುವ ಸಾಧ್ಯತೆ ಇದೆ. ಈ ಪ್ರಮಾಣ ಪತ್ರವು ಮುಂದಿನ 20 ವರ್ಷಗಳಿಗೆ ಮಾತ್ರ ಅನ್ವಯಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry