ಶನಿವಾರ, ಜೂಲೈ 11, 2020
21 °C

ಭಾರತದಲ್ಲಿ ಚೀನೀ ಭಾಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಚೀನೀ ಭಾಷೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಸಿ) ಮ್ಯಾಂಡರಿನ್ ಭಾಷಾ ಕಲಿಕೆಯ ಫೌಂಡೇಷನ್ ಕೋರ್ಸ್ ಒಂದನ್ನು ಪ್ರಾರಂಭಿಸಲಿದೆ. 2011-12ರ ಶೈಕ್ಷಣಿಕ ವರ್ಷದಿಂದ ಶುರುವಾಗಲಿರುವ ಈ ಕೋರ್ಸನ್ನು ಏಳನೇ ತರಗತಿಯ ನಂತರದ ವಿದ್ಯಾರ್ಥಿಗಳು ಮಾಡಬಹುದು.ಜಾಗತೀಕರಣದ ಈ ಕಾಲಮಾನದಲ್ಲಿ ಸಂವಹನಕ್ಕೆ ಹೆಚ್ಚು ಪ್ರಾಮುಖ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ದಾಪುಗಾಲಿಟ್ಟಿರುವುದುಗೊತ್ತಿದೆಯಷ್ಟೆ. ಅಲ್ಲಿನವರು ಇಂಗ್ಲಿಷ್ ನೆಚ್ಚಿಕೊಳ್ಳದೆ ತಮ್ಮ ಭಾಷೆಯಲ್ಲೇ ವ್ಯವಹರಿಸುವುದರಲ್ಲಿ ನಿಸ್ಸೀಮರು. ಚೀನಾದ ಉಪಭಾಷೆ ಮ್ಯಾಂಡರಿನ್. ಈ ಭಾಷೆಯನ್ನು ಬಳಸುವವರ ಸಂಖ್ಯೆ ಚೀನಾದಲ್ಲಿ ಜಾಸ್ತಿಯೇ ಇದೆ.

 

‘ಪುಟೊಂಗುವಾ’ ಎಂದೂ ಹೆಸರಾದ ಮ್ಯಾಂಡರಿನ್ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ದ ಅಧಿಕೃತ ಭಾಷೆಯೂ ಹೌದು. ತೈವಾನ್‌ನಲ್ಲೂ ಈ ಭಾಷೆ ಬಳಕೆಯಲ್ಲಿದೆ. ಸಿಂಗಪೂರ್‌ನ ನಾಲ್ಕು ಭಾಷೆಗಳಲ್ಲಿ ಇದೂ ಒಂದು. ವಿಶ್ವದಾದ್ಯಂತ ‘ಸ್ಟ್ಯಾಂಡರ್ಡ್ ಮ್ಯಾಂಡರಿನ್’ ಭಾಷೆಯನ್ನು ಎಂಟು ಕೋಟಿಗೂ ಹೆಚ್ಚು ಜನ ಬಳಸುತ್ತಾರೆ. ಹಾಗಾಗಿ ಈ ಭಾಷಾ ಕಲಿಕೆಗೆ ಸಿಬಿಎಸ್‌ಸಿ ಆದ್ಯತೆ ನೀಡುತ್ತಿದೆ. ಉದ್ಯೋಗಾವಕಾಶ ಸೃಷ್ಟಿಯಾಗಲಿದೆ

ಎಂಬ ಕಾರಣಕ್ಕೆ ಮ್ಯಾಂಡರಿನ್ ಭಾಷಾ ಕಲಿಕೆಗೆ ಮುಗಿಬೀಳುತ್ತಿರುವವರೂ ಅಸಂಖ್ಯ.ಹಿಂದಿ, ಮರಾಠಿ ಬರೆಯಲು ಬಳಸುವ ದೇವನಾಗರಿ ಶೈಲಿಯನ್ನು ಬಳಸಿ ಮ್ಯಾಂಡರಿನ್ ಭಾಷೆಯನ್ನು ಭಾರತದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಕಲಿಯಲು ಕಷ್ಟಕರ ಎನ್ನಲಾದ ಈ ಭಾಷೆಯಲ್ಲಿ ಪರಿಣತಿ ಸಾಧಿಸುವುದು ಸುಲಭವಲ್ಲ. ಮುಂದೆ ಭಾರತದಲ್ಲೂ ಮ್ಯಾಂಡರಿನ್ ನಿಪುಣರು ಹುಟ್ಟಿಕೊಳ್ಳಲಿದ್ದಾರೆಂಬುದಕ್ಕೆ ಇದುವೇ ನಾಂದಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.