ಭಾರತದಲ್ಲಿ ಹೂಡಿಕೆ ಮಾಡಿ: ಅಮೆರಿಕಕ್ಕೆ ಅಂಬಾನಿ ಸ್ವಾಗತ

7

ಭಾರತದಲ್ಲಿ ಹೂಡಿಕೆ ಮಾಡಿ: ಅಮೆರಿಕಕ್ಕೆ ಅಂಬಾನಿ ಸ್ವಾಗತ

Published:
Updated:
ಭಾರತದಲ್ಲಿ ಹೂಡಿಕೆ ಮಾಡಿ: ಅಮೆರಿಕಕ್ಕೆ ಅಂಬಾನಿ ಸ್ವಾಗತ

ವಾಷಿಂಗ್ಟನ್ (ಐಎಎನ್‌ಎಸ್): ‘ಭಾರತ ಮತ್ತು ಚೀನಾ ದಾಖಲೆಯ ಆರ್ಥಿಕ ಪ್ರಗತಿ  ಕಾಣುತ್ತಿದ್ದು, ಅಮೆರಿಕದ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ’ ಎಂದು ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಹೇಳಿದ್ದಾರೆ. ‘ಜಾಗತಿಕ ಆರ್ಥಿಕತೆಯ ಪಲ್ಲಟ ಮತ್ತು ವ್ಯಾಪಾರ ಮೇಲೆ ಅದರ ಪ್ರಭಾವ’ ಕುರಿತು ಇಲ್ಲಿ ನಡೆದ ಸಮ್ಮೇಳನದಲ್ಲಿ  ಈ ಅಭಿಪ್ರಾಯ ವ್ಯಕ್ತಪಡಿಸಿದ ಅನಿಲ್, ಅಮೆರಿಕದ ಕಂಪೆನಿಗಳು ಭಾರತದಲ್ಲಿರುವ ಹೂಡಿಕೆ ಅವಕಾಶಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.‘ಮುಂದುವರೆಯುತ್ತಿರುವ ದೇಶಗಳು ಹೆಚ್ಚು ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸದ್ಯ ಆಹಾರ ಹಣದುಬ್ಬರ ದರ ಏರುತ್ತಿರುವುದು ಭಾರತದ ಮುಂದಿರುವ ಪ್ರಮುಖ ಸವಾಲು. ಆದರೆ, ದೇಶದ ಆರ್ಥಿಕತೆ ಸಧೃಡವಾಗಿದೆ’ ಎಂದರು. ಇನ್ನೊಂದು ದಶಕದಲ್ಲಿ ಭಾರತದಲ್ಲಿ 30 ವರ್ಷದೊಳಗಿನವರ  ಸಂಖ್ಯೆ ಅರ್ಧ ಶತಕೋಟಿಗೆ ಏರಲಿದೆ. ಮೂಲಸೌಕರ್ಯ ವೃದ್ಧಿ ಮತ್ತು ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ದೇಶದ ಆರ್ಥಿಕ ವೃದ್ಧಿ ದರ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry