ಶುಕ್ರವಾರ, ನವೆಂಬರ್ 22, 2019
20 °C

ಭಾರತದಲ್ಲಿ ಹೂಡಿಕೆ-ವಾಲ್‌ಮಾರ್ಟ್ ಲಾಬಿ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತದಲ್ಲಿ ಹೂಡಿಕೆ ನಡೆಸುವ ನಿಟ್ಟಿನಲ್ಲಿ ಅಮೆರಿಕದ ಸಂಸದರ ಮೇಲೆ ವಾಲ್‌ಮಾರ್ಟ್ ಲಾಬಿ ಮುಂದುವರಿದಿದೆ. ಈ ಹಿಂದೆಯೂ ವಾಲ್‌ಮಾರ್ಟ್ ನಡೆಸಿದ ಲಾಬಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಯುತ್ತಿದೆ. ಇದರ ನಡುವೆಯೇ ಈಗ ಹೊಸ ಪ್ರಕರಣ ಬೆಳಕಿಗೆ ಬಂದಿದೆ.

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ವಾಲ್‌ಮಾರ್ಟ್ ಸುಮಾರು ಐವತ್ತು ವಿಷಯಗಳಿಗೆ ಸಂಬಂಧಿಸಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಮೇಲೆ ಪ್ರಭಾವ ಬೀರಿತ್ತು. ಮಾತ್ರವಲ್ಲದೆ, ಸುಮಾರು ರೂ.5 ಕೋಟಿಯನ್ನು ಇದಕ್ಕಾಗಿ ವೆಚ್ಚ ಮಾಡಿತ್ತು ಎಂದು ಸೆನೆಟ್ ಹಾಗೂ ಜನಪ್ರತಿನಿಧಿಗಳ ಸಭೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)