ಭಾರತದೊಳಗೆ ನುಸುಳಲು 200 ಉಗ್ರರ ಸಂಚು

7

ಭಾರತದೊಳಗೆ ನುಸುಳಲು 200 ಉಗ್ರರ ಸಂಚು

Published:
Updated:

ಶ್ರೀನಗರ:  ಶಸ್ತ್ರಸಜ್ಜಿತ 200ಕ್ಕೂ ಹೆಚ್ಚು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿಯನ್ನು ಸೇನಾ ಮೂಲಗಳು ಶನಿವಾರ ಬಹಿರಂಗಪಡಿಸಿವೆ.

ಕಾಶ್ಮೀರ ಕಣಿವೆಯಲ್ಲಿ ಪ್ರವಾಹ ಸಂತ್ರಸ್ತರ ನೆರವಿಗೆ ಹೆಚ್ಚಿನ ಸೈನಿಕರು ತೆರಳಿದ್ದಾರೆ. ಹಾಗಾಗಿ ಗಡಿಯಲ್ಲಿ ಕಡಿಮೆ ಸಂಖ್ಯೆಯ ಸೈನಿಕರು ಇರುವುದನ್ನು ಗಮನಿಸಿರುವ ಉಗ್ರರು ಭಾರತದೊಳಗೆ ನುಸುಳಲು ಸಂಚು ರೂಪಿಸಿದ್ದಾರೆ ಎಂದು ಸೇನಾ ಕಮಾಂಡರ್‌ ಸುಬ್ರತಾ ಷಾ ತಿಳಿಸಿದ್ದಾರೆ.ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ಗಡಿ  ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯನ್ನು ನಿಯೋಜಿಸಲಾಗಿದ್ದು  ಭಾರೀ ಭದ್ರತೆ ಕಲ್ಪಿಸಲಾಗಿದೆ ಎಂದು ಷಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry