ಭಾರತದ ಅಂತಃಶಕ್ತಿ: ವರದಿ ಬಿಡುಗಡೆ

7

ಭಾರತದ ಅಂತಃಶಕ್ತಿ: ವರದಿ ಬಿಡುಗಡೆ

Published:
Updated:

ಯಲಹಂಕ ವಾಯುನೆಲೆ: ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಕೆಪಿಎಂಜಿ ಜಂಟಿಯಾಗಿ ತಯಾರಿಸಿರುವ ‘ವೈಮಾಂತರಿಕ್ಷ ಮತ್ತು ರಕ್ಷಣಾ ಕೈಗಾರಿಕೆಯಲ್ಲಿ ಭಾರತದ ಅಂತಃಶಕ್ತಿಯ ಸ್ಫುರಣ’ ಎಂಬ ವರದಿಯನ್ನು ರಕ್ಷಣಾ ಖಾತೆಯ ರಾಜ್ಯ ಸಚಿವ ಡಾ.ಎಂ.ಎಂ. ಪಲ್ಲಂ ರಾಜು ಅವರು ಇಲ್ಲಿ ಗುರುವಾರ ಬಿಡುಗಡೆ ಮಾಡಿದರು. ಜಾಗತಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಮಾಡುವುದು ಹೇಗೆ ಎಂಬ ಕುರಿತು ಈ ವರದಿ ಬೆಳಕು ಚೆಲ್ಲುತ್ತದೆ.ಕಳೆದ ಎರಡು ವರ್ಷಗಳಲ್ಲಿ ಭಾರತ ಒಟ್ಟು 2466 ಕೋಟಿ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ವಿವರಿಸಿದೆ. ಅಲ್ಲದೆ ಇನ್ನೂ 4199 ಕೋಟಿ ಡಾಲರ್ ಮೊತ್ತದ ಒಪ್ಪಂದಗಳಿಗೆ ಭಾರತ ಸಹಿ ಹಾಕಲಿದೆ ಎಂದು ವರದಿ ಹೇಳಿದೆ.ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು, ಕೆಲವೇ ವರ್ಷಗಳ ಹಿಂದೆ ಶೈಶವಾವಸ್ಥೆಯಲ್ಲಿದ್ದ ಭಾರತದ ಈ ಕ್ಷೇತ್ರ ಈಗ ಜಗತ್ತಿನ ಮುಂಚೂಣಿ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry