ಶನಿವಾರ, ಮೇ 8, 2021
18 °C

ಭಾರತದ ಆರ್ಥಿಕತೆ: ಸ್ಥಿರತೆಯಿಂದ ಋಣಾತ್ಮಕ ಕಡೆಗೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಅಂತರರಾಷ್ಟ್ರೀಯ ಮಾನಕ ಸಂಸ್ಥೆ ಸ್ಟ್ಯಾಂಡರ್ಡ್ ಆಂಡ್ ಪೂರ್ಸ್ಸ್ ಸಂಸ್ಥೆಯು ಭಾರತದ ಆರ್ಥಿಕ ಸ್ಥಿತಿಗೆ ನೀಡಿದ್ದ ಸ್ಥಾನವನ್ನು ~ಸ್ಥಿರತೆ~  (BBB+) ಯಿಂದ ~ಋಣಾತ್ಮಕ~ (BBB-)ಕ್ಕೆ ಇಳಿಸಿದೆ.ಇದರಿಂದಾಗಿ ಭಾರತವು ಹೊರ ದೇಶಗಳಿಂದ ಪಡೆಯುವ ಸಾಲವು ತುಟ್ಟಿಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಕಳೆದೆರಡು ವರ್ಷಗಳಿಂದ ಭಾರತದ ಆರ್ಥಿಕ ಸ್ಥಿತಿ ಕ್ಷೀಣಿಸಿದ್ದು, ಯಾವುದೇ ಬೆಳವಣಿಗೆ ಕಾಣುತ್ತಿಲ್ಲ ಎಂದಿರುವ ಸಂಸ್ಥೆ ರಾಜಕೀಯ ಸ್ಥಿತಿಯೂ ಹದಗೆಡುತ್ತಿದೆ. ಹೀಗಾಗಿ ಭಾರತದ ಆರ್ಥಿಕ ಸ್ಥಿತಿ ಹೊಂದಿದ್ದ  ಸ್ಥಾನವು ಸ್ಥಿರತೆಯಿಂದ ಋಣಾತ್ಮಕಕ್ಕೆ ಕುಸಿಯುವಂತಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ ಕಳೆದ 5 ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 6 ರಷ್ಟಿತ್ತು. ಆದರೆ ಪ್ರಸಕ್ತ ಶೇ. 5.3ಕ್ಕೆ ಕುಸಿದಿದೆ ಎಂದೂ ಅದು ಹೇಳಿದೆ.ಇದು ಪ್ರಕಟಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲೂ ಕುಸಿತ ಆರಂಭಗೊಂಡಿತು. ತಕ್ಷಣವೇ ಸೂಚ್ಯಂಕ 188 ಅಂಶಗಳಷ್ಟು ಕುಸಿತ ದಾಖಲಿಸಿತು.ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ ~ಸ್ಟ್ಯಾಂಡರ್ಡ್ ಆಂಡ್ ಪೂರ್ಸ್ಸ್ ಸಂಸ್ಥೆಯ ಕ್ರಮದಿಂದಾಗಿ ಯಾರೂ ಚಿಂತೆಪಡಬೇಕಾದ ಅಗತ್ಯವಿಲ್ಲ. ಭಾರತಕ್ಕೆ ಇದೊಂದು ಸಕಾಲಿಕ ಎಚ್ಚರಿಕೆಯ ಗಂಟೆಯಾಗಿದೆ~ ಎಂದು ಹೇಳಿದರು. ~ಸರ್ಕಾರ ಆರ್ಥಿಕ ಸುಧಾರಣಾ ಕ್ರಮಗಳಿಗೆ ಬದ್ದವಾಗಿದೆ~ ಎಂದೂ ಅವರು  ನುಡಿದರು.ಅಷ್ಟೆ ಅಲ್ಲ ಪ್ರಸಕ್ತ ಹಣಕಾಸು ವರ್ಷದಲ್ಲಿ  ಆರ್ಥಿಕ ವೃದ್ಧಿ ದರವು ಶೇ. 7ನ್ನು ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.