ಭಾರತದ ಆರ್ಥಿಕ ಸುಧಾರಣೆ ಸಕಾಲಿಕ

7

ಭಾರತದ ಆರ್ಥಿಕ ಸುಧಾರಣೆ ಸಕಾಲಿಕ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತವು ಜಾರಿಗೊಳಿಸಿದ ಹೊಸ ಆರ್ಥಿಕ ಸುಧಾರಣೆಗಳು ಹೆಚ್ಚು ಸ್ಪರ್ಧಾತ್ಮಕವಾದ ಆರ್ಥಿಕತೆಯನ್ನು ಸೃಷ್ಟಿಸಲು ಅತ್ಯಗತ್ಯ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಐಎಫ್) ಅಭಿಪ್ರಾಯಪಟ್ಟಿದೆ.ಪಿಂಚಣಿ, ವಿಮೆ ಕ್ಷೇತ್ರಗಳಲ್ಲಿ ಹೆಚ್ಚಿನ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಿರುವ ಭಾರತ ಸರ್ಕಾರದ ಕ್ರಮಗಳನ್ನು ಅದು ಸ್ವಾಗತಿಸಿದೆ.ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಸುಧಾರಣೆಗಳು ಅತ್ಯಂತ ಸಕಾಲಿಕ ಕೂಡ ಆಗಿವೆ ಎಂದು ಐಐಎಫ್ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಡಲ್ಲರ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry