ಭಾರತದ ಜತೆ ಸಂಬಂಧ ಸುಧಾರಣೆಗೆ ಬದ್ಧ: ಪಾಕ್

7

ಭಾರತದ ಜತೆ ಸಂಬಂಧ ಸುಧಾರಣೆಗೆ ಬದ್ಧ: ಪಾಕ್

Published:
Updated:

ಇಸ್ಲಾಮಾಬಾದ್ (ಪಿಟಿಐ):  ಭಾರತದ ಜತೆ ಸಂಬಂಧ ಸುಧಾರಣೆಗೆ ಪಾಕಿಸ್ತಾನ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಪಾಕಿಸ್ತಾನದ ಹಂಗಾಮಿ ಅಧ್ಯಕ್ಷ ಫಾರೂಕ್ ನೇಕ್ ಹೇಳಿದ್ದಾರೆ.ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ನೇತೃತ್ವದ ನಿಯೋಗಕ್ಕೆ ಬುಧವಾರ ರಾತ್ರಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ನೇಕ್ ಈ ಹೇಳಿಕೆ ನೀಡಿದರು. ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಖಾಸಗಿ ಭೇಟಿಗಾಗಿ ದುಬೈಗೆ ತೆರಳಿರುವ ಹಿನ್ನೆಲೆಯಲ್ಲಿ ನೇಕ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಾರೂಕ್ ನೇಕ್ ಪಾಕಿಸ್ತಾನ ಸಂಸತ್ತಿನ ಮೇಲ್ಮನೆಯ ಅಧ್ಯಕ್ಷರು.ಆರೋಗ್ಯಕರ ಮಾತುಕತೆ ಮತ್ತು ವಿಚಾರ ವಿನಿಮಯದಿಂದ ಮಾತ್ರ ಕಾಶ್ಮೀರ ಹಾಗೂ ಜಲ ವಿವಾದ ಸೇರಿದಂತೆ ಎಲ್ಲ ವಿಷಯಗಳು ಇತ್ಯರ್ಥವಾಗಲಿವೆ ಎಂದು ನೇಕ್ ಅಭಿಪ್ರಾಯ ಪಟ್ಟರು.ಭಾರತ ಸೇರಿದಂತೆ ಇತರ ಎಲ್ಲ ನೆರೆಯ ದೇಶಗಳ ಜತೆ ಆಪ್ತ ಸಂಬಂಧ ಹೊಂದಲು ಪಾಕಿಸ್ತಾನ ಬಯಸುತ್ತದೆ. ಪ್ರಾದೇಶಿಕ ಸ್ಥಿರತೆಗೆ ಇದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry