ಶುಕ್ರವಾರ, ಡಿಸೆಂಬರ್ 6, 2019
18 °C

ಭಾರತದ ಜತೆ ಸಹಭಾಗಿತ್ವಕ್ಕೆ ಅಮೆರಿಕ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಜತೆ ಸಹಭಾಗಿತ್ವಕ್ಕೆ ಅಮೆರಿಕ ಒತ್ತು

ವಾಷಿಂಗ್ಟನ್ (ಪಿಟಿಐ): ಚೀನಾದ ಅಭಿವೃದ್ಧಿಯನ್ನು ತನ್ನ ಭದ್ರತೆಗೆ ಅಪಾಯಕಾರಿ ಎಂದು ಪರಿಗಣಿಸಿರುವ ಅಮೆರಿಕವು, ಭಾರತದೊಂದಿಗೆ ದೀರ್ಘಾವಧಿ ಕಾರ್ಯತಂತ್ರ ಸಹಭಾಗಿತ್ವ ಸಾಧಿಸುವ ಗುರಿ ಹಾಕಿಕೊಂಡಿದೆ.

ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ನಲ್ಲಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ಗುರುವಾರ ಸಂಜೆ ಬಿಡುಗಡೆ ಮಾಡಿದ `ರಕ್ಷಣಾ ಇಲಾಖೆ ಮಾರ್ಗದರ್ಶಿ~ಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.`ಅಮೆರಿಕದ ಜಾಗತಿಕ ನಾಯಕತ್ವದ ಸಂರಕ್ಷಣೆ: 21ನೇ ಶತಮಾನದ ರಕ್ಷಣಾ ಆದ್ಯತೆಗಳು~ ಶೀರ್ಷಿಕೆಯ ಎಂಟು ಪುಟಗಳ ಈ ಮಾರ್ಗದರ್ಶಿಯಲ್ಲಿ, ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಹಾಗೂ ಹಿಂದೂ ಮಹಾಸಾಗರದ ವಿಶಾಲ ವ್ಯಾಪ್ತಿಯ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲ ಸಾಮರ್ಥ್ಯ ಭಾರತಕ್ಕಿದೆ ಎಂದು ಅಭಿಪ್ರಾಯಪಡಲಾಗಿದೆ.ಚೀನಾವು ಪ್ರಾದೇಶಿಕವಾಗಿ ಸಶಕ್ತ ರಾಷ್ಟ್ರವಾದರೆ ಅದು ಮುಂದೊಂದು ದಿನ ಅಮೆರಿಕದ ಆರ್ಥಿಕ ಹಾಗೂ ರಕ್ಷಣಾ ಭದ್ರತೆಗೆ ಹಲವಾರು ರೀತಿಯಲ್ಲಿ ಭಂಗ ಉಂಟು ಮಾಡಬಹುದೆಂದು ಅದರಲ್ಲಿ ಎಚ್ಚರಿಸಲಾಗಿದೆ.ಇದೇ ವೇಳೆ, ಅಮೆರಿಕದ ಸೇನಾ ಪಡೆ ಗಾತ್ರವನ್ನು ಇಳಿಸುವ ಅಗತ್ಯವನ್ನೂ ಮಾರ್ಗದರ್ಶಿ ಒತ್ತಿ ಹೇಳಿದೆ. ಈ ದಿಸೆಯಲ್ಲಿ ಕೆಲವು ಸೇನಾ ಯೋಜನೆಗಳನ್ನು ಕಡಿತಗೊಳಿಸಲಾಗುವುದೆಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ; ಆದರೆ ಯಾವ ಯೋಜನೆಯನ್ನೂ ಸಂಪೂರ್ಣ ರದ್ದು ಪಡಿಸುವುದಿಲ್ಲ ಎಂದೂ ತಿಳಿಸಲಾಗಿದೆ.ಒಸಾಮ ಬಿನ್ ಲಾಡೆನ್ ಹಾಗೂ ಅಲ್‌ಖೈದಾದ ಹಲವು ಪ್ರಮುಖರ ಹತ್ಯೆಯಿಂದ ಉಗ್ರರ ಸಂಘಟನೆ ದುರ್ಬಲವಾಗಿದೆ. ಆದರೂ ಆ ಜಾಲ ಪಾಕ್, ಆಘ್ಘಾನಿಸ್ತಾನ, ಯೆಮನ್, ಸೊಮಾಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಸಂಚು ಹೆಣೆಯುವಲ್ಲಿ ನಿರತವಾಗಿವೆ ಎಂದಿದೆ.ಹಿಲರಿ ಹರ್ಷ: ಸೇನಾ ಗಾತ್ರ ಕುಗ್ಗಿಸುವ ಜತೆಗೆ ಭಾರತದೊಂದಿಗಿನ ಕಾರ್ಯತಂತ್ರ ಪಾಲುದಾರಿಕೆಗೆ ಒತ್ತು ನೀಡುವ ಈ ಹೊಸ ಮಾರ್ಗದರ್ಶಿಯು ಬದಲಾದ ಜಗತ್ತಿನಲ್ಲಿ ರಾಷ್ಟ್ರದ ನಾಯಕತ್ವವನ್ನು ಸದೃಢಗೊಳಿಸಲು ನೆರವಾಗುತ್ತದೆ ಎಂದು ರಕ್ಷಣಾ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸಂತಸ ವ್ಯಕ್ತಪಡಿಸಿದ್ದಾರೆ.

 

`ಭಾರತ, ಪಾಕ್ ಎರಡೂ ಮುಖ್ಯ~
ವಾಷಿಂಗ್ಟನ್ (ಪಿಟಿಐ): ಭಾರತ ಮತ್ತು ಪಾಕಿಸ್ತಾನದೊಂದಿಗಿನ ತನ್ನ ಮೈತ್ರಿ ಸುಧಾರಣೆ  ಯತ್ನಗಳನ್ನು ಶೂನ್ಯ ಫಲಿತಾಂಶದ ಪ್ರಯತ್ನಗಳೆಂದು ಭಾವಿಸುವುದು ಸಲ್ಲ. ಈ ಎರಡೂ ರಾಷ್ಟ್ರಗಳೊಂದಿಗಿನ ಸಂಬಂಧ ವೃದ್ಧಿಗೆ ತಾನು ಅತ್ಯಂತ ಮಹತ್ವ ನೀಡುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ.ಆದರೆ ಇದೇ ವೇಳೆ, ಆಘ್ಘಾನಿಸ್ತಾನದಲ್ಲಿನ ಅಂತಿಮ ಯಶಸ್ಸಿಗೆ ಪಾಕಿಸ್ತಾನದಲ್ಲಿರುವ ಉಗ್ರರ ಸುರಕ್ಷಿತ ಅಡಗುದಾಣಗಳು ಇನ್ನೂ ತೊಡಕಾಗಿವೆ ಎಂದು ರಾಷ್ಟ್ರದ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್ ಸ್ಪಷ್ಟಪಡಿಸಿದೆ.`ಮಧ್ಯ ಹಾಗೂ ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಇವೆರಡೂ ಪ್ರಮುಖ ರಾಷ್ಟ್ರಗಳಾಗಿದ್ದು, ಎರಡೂ ರಾಷ್ಟ್ರಗಳೊಂದಿಗೆ ನಾವು ಕಾರ್ಯತಂತ್ರ ಸಹಭಾಗಿತ್ವ ಹೊಂದುವ ಅಗತ್ಯವಿದೆ. ಈ ಬಗ್ಗೆ ಅನುಮಾನವೇ ಬೇಡ~ ಎಂದು ಪೆಂಟಗನ್ ವಕ್ತಾರರಾದ ನೌಕಾಪಡೆ ಕ್ಯಾಪ್ಟನ್ ಜಾನ್ ಕಿರ್ಬಿ ಗುರುವಾರ ಬ್ಲಾಗರ್‌ಗಳ ಸಭೆಯಲ್ಲಿ ಹೇಳಿದ್ದಾರೆ.ಇದೇ ವೇಳೆ, `ಆಫ್ಘಾನಿಸ್ತಾನದಲ್ಲಿ ಪ್ರಜಾತಂತ್ರ ರಕ್ಷಿಸುವ ನಮ್ಮ ಉದ್ದೇಶ ಪಾಕಿಸ್ತಾನದೊಂದಿಗಿನ ರಚನಾತ್ಮಕ ಬಾಂಧವ್ಯವನ್ನು ಅವಲಂಬಿಸಿದೆ ಎಂಬುದನ್ನು ಪೆಂಟಗನ್ ಬಹಳ ಹಿಂದಿನಿಂದ ಪ್ರತಿಪಾದಿಸುತ್ತಾ ಬಂದಿದೆ~ ಎಂದು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)