ಭಾರತದ ನಾಕೌಟ್ ಪಂದ್ಯಗಳು ಭಾರತದಲ್ಲೇ

7

ಭಾರತದ ನಾಕೌಟ್ ಪಂದ್ಯಗಳು ಭಾರತದಲ್ಲೇ

Published:
Updated:

ಢಾಕಾ: ಭಾರತ ತಂಡ ಈ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ತನ್ನ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ಗೆ ಅರ್ಹತೆ ಗಳಿಸಿದರೆ ಆ ಎರಡೂ ಪಂದ್ಯಗಳನ್ನು ಅಹ್ಮದಾಬಾದ್ ಮತ್ತು ಚಂಡೀಗಢದಲ್ಲೇ ಆಡಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಿಇಒ ಹರೂನ್ ಲೊರ್ಗಾಟ್ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಭಾರತ ತಂಡ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಭಾರತದಲ್ಲೇ ಆಡುವುದೇ ಅಥವಾ ಶ್ರೀಲಂಕಾದಲ್ಲಿ ಆಡುವುದೇ ಎಂಬ ಬಗ್ಗೆ ಅನುಮಾನಗಳಿದ್ದವು. “ಆತಿ ಥೇಯ ತಂಡಗಳೆರಡು ಭಾರತದ ಜೊತೆ ಶ್ರೀಲಂಕಾ ಕ್ವಾರ್ಟರ್ ಫೈನಲ್ ಅಥವಾ ಸೆಮಿಫೈನಲ್‌ನಲ್ಲಿ ಎದುರಾಳಿಗಳಾದರೆ, ಐಸಿಸಿ ಕ್ರಮಾಂಕ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ಭಾರತಕ್ಕೇ ಪಂದ್ಯ ನಡೆಸುವ ಅವಕಾಶ ಸಿಗುತ್ತದೆ.ಭಾರತ ತನ್ನ ಪಂದ್ಯಗಳನ್ನು ಈಗ ನಿರ್ಧರಿಸಿರುವಂತೆ ಅಹ್ಮದಾ ಬಾದ್ ಮತ್ತು ಚಂಡೀಗಢದಲ್ಲೇ ಆಡಲಿದೆ” ಎಂದು ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಾಕಿಸ್ತಾನ ತಂಡ ಫೈನಲ್‌ಗೆ ಅರ್ಹತೆ ಗಳಿಸಿದರೆ ಮುಂಬೈನಲ್ಲಿ ಆಡ ಲು ಕೊಡುವುದಿಲ್ಲ ಎಂದು ಶಿವಸೇನೆ ಬೆದರಿಕೆ ಹಾಕಿರುವ ಬಗ್ಗೆ ಕೇಳಿದಾಗ, ‘ಇನ್ನೂ ಅದರ ಬಗ್ಗೆ ಏನೂ ಗೊತ್ತಿಲ್ಲ. ಎಂಥ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಐಸಿಸಿ ಸಿದ್ಧವಾಗಿದೆ’ ಎಂದು ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry