ಭಾರತದ ನೆರವಿಗೆ ಜುನೇಜಾ

7
ಕ್ರಿಕೆಟ್‌: ಕಿವೀಸ್‌ ಉತ್ತಮ ಮೊತ್ತ

ಭಾರತದ ನೆರವಿಗೆ ಜುನೇಜಾ

Published:
Updated:
ಭಾರತದ ನೆರವಿಗೆ ಜುನೇಜಾ

ವಿಶಾಖಪಟ್ಟಣ (ಪಿಟಿಐ): ವಾಸುದೇವನ್‌ ಜಗದೀಶ್‌ (40) ಮತ್ತು ಮನ್‌ಪ್ರೀತ್‌ ಜುನೇಜಾ (43) ಅವರ ಅಜೇಯ ಆಟದ ನೆರವಿನಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದೆ.ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 2 ವಿಕೆಟ್‌ಗೆ 94 ರನ್‌ ಗಳಿಸಿತ್ತು. ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 437 ರನ್‌ ಗಳಿಸಿ ಆಲೌಟ್‌ ಆಗಿತ್ತು.ಅಭಿಷೇಕ್‌ ನಾಯರ್‌ ನೇತೃತ್ವದ ಭಾರತ ತಂಡದ ಆರಂಭ ಆಘಾತಕಾರಿಯಾಗಿತ್ತು. ಉನ್ಮುಕ್ತ್‌ ಚಾಂದ್‌ (4) ಮತ್ತು ವಿಜಯ್‌ ಜೋಲ್‌ (2) ಬೇಗನೇ ವಿಕೆಟ್‌ ಒಪ್ಪಿಸಿದರು. ಈ ವೇಳೆ ತಂಡದ ಮೊತ್ತ 16.ಈ ಹಂತದಲ್ಲಿ ಜೊತೆಯಾದ ಜಗದೀಶ್‌ ಮತ್ತು ಜುನೇಜಾ ತಂಡದ ನೆರವಿಗೆ ನಿಂತರು. ಮುರಿಯದ ಮೂರನೇ ವಿಕೆಟ್‌ಗೆ 78 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು. ಆತಿಥೇಯ ತಂಡ ಇದೀಗ 343 ರನ್‌ಗಳ ಹಿನ್ನಡೆಯಲ್ಲಿದೆ.ಇದಕ್ಕೂ ಮುನ್ನ ಎಂಟು ವಿಕೆಟ್‌ಗೆ 300 ರನ್‌ಗಳಿಂದ ಆಟ ಮುಂದುವರಿ­ಸಿದ ನ್ಯೂಜಿಲೆಂಡ್‌ ಮತ್ತೆ 137 ರನ್‌ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಡಗ್‌ ಬ್ರೇಸ್‌ವೆಲ್‌ (96) ಮತ್ತು ಇಂದರ್‌ಬಿರ್‌ ಸಿಂಗ್‌ ಸೋಧಿ (57) ಒಂಬತ್ತನೇ ವಿಕೆಟ್‌ಗೆ 162 ರನ್‌ಗಳನ್ನು ಸೇರಿಸಿ ಭಾರತದ ಬೌಲರ್‌ಗಳನ್ನು ಕಾಡಿದರು. ಬ್ರೇಸ್‌ವೆಲ್‌ ಅವರನ್ನು ‘ಕ್ಲೀನ್‌ಬೌಲ್ಡ್‌’ ಮಾಡುವ ಮೂಲಕ ಅಭಿಷೇಕ್‌ ನಾಯರ್‌ ಈ ಜೊತೆಯಾಟ ಮುರಿದರು. 132 ಎಸೆತಗಳನ್ನು ಎದುರಿ­ಸಿದ ಬ್ರೇಸ್‌ವೆಲ್‌ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಆದರೆ ಅವರಿಗೆ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ತಾಳ್ಮೆಯ ಬ್ಯಾಟಿಂಗ್‌ ತೋರಿದ ಸೋಧಿ 142 ಎಸೆತಗಳನ್ನು ಎದುರಿಸಿದರು.ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 121.1 ಓವರ್‌ಗಳಲ್ಲಿ 437 (ಡಗ್‌ ಬ್ರೇಸ್‌ವೆಲ್‌ 96, ಇಂದರ್‌ಬೀರ್‌ ಸಿಂಗ್‌ ಸೋಧಿ 57, ಧವಳ್‌ ಕುಲಕರ್ಣಿ 53ಕ್ಕೆ 3, ಜಲಜ್‌ ಸಕ್ಸೇನಾ 101ಕ್ಕೆ 2);  ಭಾರತ ‘ಎ’: 38 ಓವರ್‌ಗಳಲ್ಲಿ 2 ವಿಕೆಟ್‌ಗೆ 94 (ವಾಸುದೇವನ್‌ ಜಗದೀಶ್‌ ಬ್ಯಾಟಿಂಗ್‌ 40, ಮನ್‌ಪ್ರೀತ್‌ ಜುನೇಜಾ ಬ್ಯಾಟಿಂಗ್‌ 43, ಮಾರ್ಕ್ ಗಿಲೆಸ್ಪಿ 11ಕ್ಕೆ 1, ಡಗ್‌ ಬ್ರೇಸ್‌ವೆಲ್‌ 23ಕ್ಕೆ 1)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry