ಮಂಗಳವಾರ, ಜನವರಿ 28, 2020
29 °C

ಭಾರತದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದ ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚೀನಾ ಪಡೆ  ವಾರದ ಹಿಂದೆ ಲಡಾಕ್‌ನ ಚುಮರ್‌ ಪ್ರದೇಶ­ದಲ್ಲಿ ವಾಸ್ತವ ಗಡಿ ರೇಖೆ ಬಳಿ ಭಾರತದ ಐವರು ಪ್ರಜೆಗ-­ಳನ್ನು ವಶಕ್ಕೆ ಪಡೆದು ನಂತರ ಬಿಡುಗಡೆ  ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕಳೆದ ವಾರ ಚೀನಾ ಪಡೆ, ಚುಮರ್‌­ನಲ್ಲಿ ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಈ ಐವರನ್ನು ಜಾನುವಾರು ಸಮೇತ ವಶಕ್ಕೆ ಪಡೆ­ದು­ಕೊಂಡಿತ್ತು. ನಂ­ತರ ಉಭಯ ದೇಶಗಳ ಸೇನಾಧಿ­ ಕಾರಿಗಳ ಸಭೆ ಬಳಿಕ  ಇವರನ್ನು  ಬಿಡುಗಡೆ ಮಾಡಿತು.ಇದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ ಎಂದು ಸೇನೆ ಹೇಳಿದೆ. ಮೊದಲು ವರದಿಯಾದಂತೆ ಇವರು ಭಾರತದ ಸೇನೆಗೆ ಸೇರಿದ ಕೂಲಿಯಾಳುಗಳಲ್ಲ, ನಾಗರಿಕರು ಎಂದು ಸೇನೆ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)