ಭಾರತದ ಪ್ರವಾಸಿಗರಿಗೆ ಒಂದೇ ವೀಸಾ

6

ಭಾರತದ ಪ್ರವಾಸಿಗರಿಗೆ ಒಂದೇ ವೀಸಾ

Published:
Updated:

ನಾಂಪೇನ್(ಐಎಎನ್‌ಎಸ್): ಕಾಂಬೋಡಿಯಾ ಮತ್ತು ಥಾಯ್ಲೆಂಡ್ ತಮ್ಮ ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದೇ ವೀಸಾ ನೀಡುವ ಯೋಜನೆಯನ್ನು ಗುರುವಾರ ಜಾರಿ ಮಾಡಿವೆ. ಇಂತಹ ವೀಸಾವನ್ನು ಭಾರತವೂ ಸೇರಿದಂತೆ 35 ರಾಷ್ಟ್ರಗಳ ಪ್ರವಾಸಿಗರು ಪಡೆಯಲು ಅರ್ಹರು ಎಂದು ಕಾಂಬೋಡಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.`ಯೇಯವಾಡಿ- ಚಾಒಫ್ರಿಯ- ಮೆಕಾಂಗ್ ಆರ್ಥಿಕ ಸಹಕಾರ ಕಾರ್ಯತಂತ್ರ' (ಎಸಿಎಂಇಸಿಎಸ್) ಕಾರ್ಯಕ್ರಮದಡಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. `ಆಸಿಯಾನ್' ಒಕ್ಕೂಟದ ಐದು ರಾಷ್ಟ್ರಗಳಾದ ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಥಾಯ್ಲೆಂಡ್‌ಗಳು 2003ರಲ್ಲಿ `ಎಸಿಎಂಐಸಿಎಸ್' ಕಾರ್ಯಕ್ರಮ ರೂಪಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry