ಭಾನುವಾರ, ಮೇ 9, 2021
24 °C
ಟೇಬಲ್ ಟೆನಿಸ್: ಬೆಳ್ಳಿಗೆ ತೃಪ್ತಿಪಟ್ಟ ಬಾಲಕರ ತಂಡ

ಭಾರತದ ಬಾಲಕಿಯರಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯುವ ಆಟಗಾರ್ತಿ ಸುತೀರ್ಥಾ ಮುಖರ್ಜಿ ನೇತೃತ್ವದ ಭಾರತ ಬಾಲಕಿಯರ ತಂಡ ಸ್ಲೋವಾಕಿಯಾದಲ್ಲಿ ನಡೆದ ಸ್ಲೊವಾಕ್ ಜೂನಿಯರ್ ಓಪನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಜಯಿಸಿದರೆ, ಬಾಲಕರ ತಂಡ ಬೆಳ್ಳಿ ಗೆದ್ದುಕೊಂಡಿತು.ಶುಕ್ರವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತದ ಬಾಲಕಿಯರು 3-2ರಲ್ಲಿ ಸರ್ಬಿಯಾ `ಎ' ತಂಡವನ್ನು ಮಣಿಸಿ ಈ ಸಾಧನೆ ಮಾಡಿದರು. ಮೊದಲ ಸಿಂಗಲ್ಸ್‌ನಲ್ಲಿ ಭಾರತದ ಮಾಣಿಕಾ ಬಾತ್ರಾ 7-11, 3-11, 11-4, 11-4, 15-13ರಲ್ಲಿ ಅನ್ನಾ ಫೆನ್ನಿವಿಸಿ ಎದುರು ಗೆಲುವು ಪಡೆದು ಆರಂಭಿಕ ಮುನ್ನಡೆ ತಂದುಕೊಟ್ಟರು. ಮತ್ತೊಂದು ಸಿಂಗಲ್ಸ್‌ನಲ್ಲಿ ರೀತ್ 3-1ರಲ್ಲಿ ವಿಕ್ಟೋರಿಯಾ ತೃಸಿನ್‌ಕೀ ಎದುರು ಗೆಲುವು ಸಾಧಿಸಿ ಮುನ್ನಡೆಯನ್ನು 2-0ರಲ್ಲಿ ಹೆಚ್ಚಿಸಿದರು.ಇನ್ನೊಂದು ಮಹತ್ವದ ಸಿಂಗಲ್ಸ್‌ನಲ್ಲಿ 15 ವರ್ಷದ ಸುತೀರ್ಥಾ 8-11, 11-9, 8-11, 11-2, 16-14ರಲ್ಲಿ ಅನೆತಾ ಮಾಕಸುತಿ ಅವರನ್ನು ಮಣಿಸಿ ಭಾರತಕ್ಕೆ ಬಂಗಾರ ಖಚಿತಪಡಿಸಿದರು.ಬಾಲಕರಿಗೆ ಬೆಳ್ಳಿ: ಭಾರತದ ಬಾಲಕರ ತಂಡದವರು ಪ್ರಶಸ್ತಿ ಘಟ್ಟದ ಹೋರಾಟದಲ್ಲಿ 1-3ರಲ್ಲಿ ಜೆಕ್ ಗಣರಾಜ್ಯದ ಎದುರು ಸೋಲು ಕಂಡರು. ಬಾಲಕರ ತಂಡದ ಸುಧಾನ್ಶು ಗ್ರೋವರ್ ಮತ್ತು ಅಭಿಷೇಕ್ ಯಾದವ್ ಮೊದಲ ಸಿಂಗಲ್ಸ್‌ಗಳಲ್ಲಿ ನಿರಾಸೆ ಅನುಭವಿಸಿದರು. ರೋಹಿತ್ ರಾಜಶೇಖರ್ 3-2ರಲ್ಲಿ ಜಿಕ್ ಗಣರಾಜ್ಯದ ತಿಬೊರ್ ಪಾವಿಲಿಕ್ ಎದುರು ಗೆಲುವು ಪಡೆದು ಭಾರತದ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ, ರಿವರ್ಸ್ ಸಿಂಗಲ್ಸ್‌ನಲ್ಲಿ ಅಭಿಷೇಕ್ 1-3ರಲ್ಲಿ ಡೇವಿಡ್ ಎದುರು ಸೋಲು ಅನುಭವಿಸಿದ ಕಾರಣ ಭಾರತ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.