ಭಾರತದ ಮಾಧ್ಯಮಗಳ ವಿರುದ್ಧ ಚೀನಾ ಟೀಕೆ

ಶನಿವಾರ, ಜೂಲೈ 20, 2019
24 °C

ಭಾರತದ ಮಾಧ್ಯಮಗಳ ವಿರುದ್ಧ ಚೀನಾ ಟೀಕೆ

Published:
Updated:

ಸಿಂಗಪುರ (ಪಿಟಿಐ): `ಭಾರತ ಮತ್ತು ಚೀನಾ ನಡುವಿನ ಸೇನಾ ಸಂಬಂಧ ವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಆದರೆ ಉಭಯ ದೇಶಗಳ ನಡುವಿನ ವಿವಾದಗಳು ಮತ್ತು ಸೂಕ್ಷ್ಮ ವಿಷಯಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕಷ್ಟೆ~ ಎಂದು ಚೀನಾದ ರಕ್ಷಣಾ ಸಚಿವರು ಹೇಳಿದ್ದಾರೆ.ಭಾರತದ ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮಗಳು ಆಗಾಗ್ಗೆ ಮಾಡುತ್ತಿರುವ ಹೊಣೆರಹಿತ ಆರೋಪಗಳಿಂದ ಉಂಟಾಗುತ್ತಿರುವ ಕೆಲವು ಕೃತಕ ಅಡೆತಡೆಗಳಿಂದ ಎರಡೂ ದೇಶಗಳ ರಕ್ಷಣಾ ಸಹಕಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ದೂರಿದರು.ಇಲ್ಲಿ ಆಯೋಜಿಸಿದ್ದ 10ನೇ ಏಷ್ಯಾ ಭದ್ರತಾ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ರಕ್ಷಣಾ ರಾಜ್ಯ ಸಚಿವ ಎಂ.ಎಂ.ಪಲ್ಲಂ ರಾಜು ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅತ್ಯಂತ ಕ್ರಿಯಾಶೀಲ ಮಾಧ್ಯಮ ಇದೆ.ಅದು ಕೆಲವೊಮ್ಮೆ ಭಾರತ ಸರ್ಕಾರದ ಕಾರ್ಯನಿರ್ವಹಣೆಯನ್ನೇ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಕ್ರಿಯಿಸಿದ ರಾಜು, ಚೀನಾದ ಜೊತೆಗಿನ ರಕ್ಷಣಾ ಬಾಂಧವ್ಯ ವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry