ಬುಧವಾರ, ಜನವರಿ 29, 2020
29 °C
ಹತ್ತು ವರ್ಷದಲ್ಲಿ 12 ಜನ ನಾಪತ್ತೆ!

ಭಾರತದ ರಾಜತಾಂತ್ರಿಕರ ಮನೆಗೆಲಸದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಬ್ರಾಗಡೆ ಬಂಧನ ಹಾಗೂ ಅವರ ಮನೆಗೆಲಸದ ಸಹಾಯಕಿ ಸಂಗೀತಾ ರಿಚರ್ಡ್ಸ್ ಅಕ್ರಮವಾಗಿ ಭಾರತದಿಂದ ಅಮೆರಿಕಕ್ಕೆ ತೆರಳಿರುವ ಘಟನೆ ಸಾಕಷ್ಟು ಸುದ್ದಿಮಾಡಿದ ಬೆನ್ನಹಿಂದೆಯೇ ಅಮೆ ರಿಕದಲ್ಲಿರುವ ಈ ಹಿಂದಿನ ರಾಜತಾತ್ರಿಕ ಅಧಿಕಾರಿಗಳ ಮನೆಗೆಲಸದವರು ಕೆಲಸ ತೊರೆದ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ.ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ಮೀರಾ ಶಂಕರ್‌ 2011ರಲ್ಲಿ ಸ್ವದೇಶಕ್ಕೆ ಮರಳುವ ಒಂದು ದಿನ ಮೊದಲು ಅವರ ಮನೆಗೆಲಸದಾಕೆ ಯಾರಿಗೂ ಮಾಹಿತಿ ನೀಡದೆ ಪರಾರಿಯಾಗಿದ್ದಳು. ನಂತರ  ಈವರೆಗೂ ಆಕೆ ತಿರುಗಿಬಂದಿಲ್ಲ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.ಪರಾರಿಯಾದ ಈಕೆಯ ಪಾಸ್‌ಪೋರ್ಟ್ ರದ್ದುಗೊಳಿಸಲು ಕೋರಿ ಸ್ಥಳೀಯ ಪೊಲೀಸರು ಹಾಗೂ ವಿದೇಶಾಂಗ ಸಚಿ

ವಾಲ­ಯಕ್ಕೆ ದೂರು ನೀಡಲಾಗಿತ್ತು. ಪತ್ತೆಯಾಗದ ಈಕೆ ಅಮೆರಿಕ­ದಲ್ಲಿ ಅಕ್ರಮವಾಗಿ ನೆಲೆಸಿದ್ದಾಳೆ ಎಂದು ಶಂಕಿಸಲಾಗಿದೆ.

ಭಾರತೀಯ ರಾಜತಾಂತ್ರಿಕರ ಅಧಿಕೃತ ನಿವಾಸದಿಂದ ಭಾರತೀಯ ಮೂಲದ ಮನೆಕೆಲಸದಾಳು ಕಣ್ಮರೆಯಾದ ಪ್ರಕರಣ ಇದೊಂದೇ ಅಲ್ಲ. ಇಂತಹ ಕನಿಷ್ಠ ಒಂದು ಡಜನ್‌ ಪ್ರಕರಣಗಳು ಕಳೆದೊಂದು ದಶಕದಲ್ಲಿ ನಡೆದಿವೆ ಎಂದು ಮೂಲಗಳು ತಿಳಿಸುತ್ತವೆ.ವಾಷಿಂಗ್ಟನ್‌ನಲ್ಲಿರುವ ವಿವಿಧ ದೇಶಗಳ ಪ್ರಮುಖ ರಾಯಭಾರಿ ಕಚೇರಿಗಳಲ್ಲಿ ಭಾರತವೂ ಒಂದಾಗಿದ್ದು ಇಲ್ಲಿರುವ ರಾಯಭಾರಿಗಳ ಮನೆಗೆಲಸದವರು ಕಣ್ಮರೆ ಇಲ್ಲವೇ ನಾಪತ್ತೆಯಾಗಿರುವ ಪ್ರಕರಣಗಳು ಹಲವು ಎಂದು ಹೇಳಲಾಗಿದೆ. ಮನೆಗೆಲಸದವರು ಮಾತ್ರವಲ್ಲದೇ ರಾಜತಾಂತ್ರಿಕರ ಕಚೇರಿ, ಅಧಿಕೃತ ನಿವಾಸಗಳ ಭದ್ರತೆಗೆಂದು ನಿಯೋಜಿ ಸಲಾದ ಭಾರತೀಯ ಮೂಲದವರು ತಮ್ಮ ಅವಧಿಯ ಕೊನೆಯಲ್ಲಿ ಹೇಳದೆಕೇಳದೇ ಕೆಲಸಬಿಟ್ಟು ತೆರಳಿದ ಪ್ರಕರಣಗಳೂ ಸಾಕಷ್ಟಿವೆ.ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ನ್ಯೂಯಾರ್ಕ್, ಸ್ಯಾನ್‌ಫ್ರಾನ್ಸಿಸ್ಕೊ, ಹ್ಯೂಸ್ಟನ್‌, ಅಟ್ಲಾಂಟಾ ಮತ್ತು ಷಿಕಾಗೊದಲ್ಲಿರುವ ಕಾನ್ಸುಲೇಟ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಕಿ ಭಾರತೀಯ ಮೂಲದ ಸಹಾಯಕರು ಎಷ್ಟು ಜನರಿದ್ದಾರೆ ಎನ್ನುವ ಮಾಹಿತಿಯನ್ನೂ ಭಾರತೀಯ ರಾಯಭಾರ ಕಚೇರಿ ಒದಗಿಸಿಲ್ಲ.ಭಾರತೀಯ ಮೂಲದ ಮನೆಗೆಲಸದ ಸಹಾಯಕರಿಗೆ ಅಮೆರಿಕ ಸರ್ಕಾರ ಎ–3 ವೀಸಾ ನೀಡುತ್ತಿದ್ದು 2012ರಲ್ಲಿ ಇಂತಹ 54 ವೀಸಾಗಳನ್ನು ವಿತರಿಸಲಾಗಿದೆ. ಕಳೆದ ವರ್ಷ ಅಮೆರಿಕ ಇಂತಹ ಒಟ್ಟು 1,141 ವೀಸಾಗಳನ್ನು ವಿತರಿಸಿದ್ದು 749 ವೀಸಾ ಅರ್ಜಿಗಳನ್ನು ತಿರಸ್ಕರಿಸಿತ್ತು.ಅಮೆರಿಕದಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು ಹಾಗೂ ವಿದೇಶಿ ಅಧಿಕಾರಿಗಳಿಗೆ ಎ–1 ಹಾಗೂ ಎ–2 ವೀಸಾ ನೀಡಲಾಗುತ್ತಿದ್ದು ಇವರ ಸಹಾಯಕರಿಗೆ ಎ–3 ವೀಸಾ ನೀಡಲಾಗುತ್ತದೆ. 2011ರಲ್ಲಿ 32, 2010ರಲ್ಲಿ 50, 2009ರಲ್ಲಿ 60, 2008ರಲ್ಲಿ 38, 2007ರಲ್ಲಿ 35, 2006ರಲ್ಲಿ 40, 2005ರಲ್ಲಿ 60 ಇಂತಹ ಎ–3 ವೀಸಾಗಳನ್ನು ಭಾರತೀಯ ಮೂಲದ ಸಹಾಯಕರಿಗೆ ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಖಾತೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಅಮೆರಿಕ  ಇಂತಹ 470ಕ್ಕೂ ಹೆಚ್ಚು ವೀಸಾಗಳನ್ನು ಭಾರತಕ್ಕೆ ನೀಡಿದೆ.

ಪ್ರತಿಕ್ರಿಯಿಸಿ (+)