ಭಾರತದ ವೀಸಾ ನಿಯಮ ಸಡಿಲಿಕೆ

7

ಭಾರತದ ವೀಸಾ ನಿಯಮ ಸಡಿಲಿಕೆ

Published:
Updated:

ಜೊಹಾನ್ಸ್‌ಬರ್ಗ್ (ಪಿಟಿಐ):  ದಕ್ಷಿಣ ಆಫ್ರಿಕಾ ಪ್ರವಾಸಿಗರು ಮತ್ತು ವ್ಯಾಪಾರಿಗಳ ಭಾರತ ಭೇಟಿಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಭಾರತೀಯ ಹೈಕಮಿಷನ್ ವೀಸಾ ನಿಯಮಗಳನ್ನು ಸಡಿಲಿಸಿದೆ.ಪ್ರವಾಸೋದ್ಯಮ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಭಾರತದ ಹೈಕಮಿಷನರ್ ವೀರೇಂದ್ರ ಗುಪ್ತಾ, 2 ತಿಂಗಳ ಬಳಿಕವೂ ಹಿಂತಿರುಗದೇ ಇರುವ ಪ್ರವಾಸಿಗರ ಮೇಲೆ ಹೇರಲಾಗಿದ್ದ ನಿರ್ಬಂಧವೂ ಇದರಲ್ಲಿ ಅಡಕವಾಗಿದೆ ಎಂದರು.`ಹಲವು ಪ್ರವಾಸಿಗರು ಭಾರತವನ್ನು ಪ್ರವೇಶ ಕೇಂದ್ರವಾಗಿರಿಸಿಕೊಂಡು ಅಲ್ಲಿಂದ ಬೇರೆ ರಾಷ್ಟ್ರಗಳಿಗೆ ಸಣ್ಣ ಪ್ರವಾಸಗಳನ್ನು ನಡೆಸುತ್ತಿರುವುದರಿಂದ ನಾವು ತೆಗೆದುಕೊಂಡ ಕ್ರಮ ಸೂಕ್ತವಾಗಿದೆ. ಮೊದಲಿನಿಂದಲೂ ಭಾರತ ಈ ಸಮಸ್ಯೆಯನ್ನು ಎದುರಿಸುತ್ತಿತ್ತು. ನಾವು ಅದಕ್ಕೆ ವಿನಾಯಿತಿಯನ್ನೂ ನೀಡಬೇಕಾಗಿತ್ತು. ಆದರೆ ಈಗ ಅದನ್ನು ಮುಂದುವರಿಸಬೇಕಾದ ಅಗತ್ಯ ಇಲ್ಲ' ಎಂದು  ಹೇಳಿದರು.ಸದ್ಯದಲ್ಲೇ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ವೀಸಾ ಹಂಚಿಕೆ ಕಾರ್ಯವನ್ನು ಹೊರಗುತ್ತಿಗೆಗೆ ವಹಿಸಲಿವೆ ಎಂದೂ ಗುಪ್ತಾ ತಿಳಿಸಿದರು.ಇದುವರೆಗೆ ದಕ್ಷಿಣ ಆಫ್ರಿಕಾಧ ಪ್ರಿಟೋರಿಯಾ, ಜೊಹಾನ್ಸ್‌ಬರ್ಗ್, ಡರ್ಬನ್ ಮತ್ತು ಕೇಪ್‌ಟೌನ್‌ನಲ್ಲಿನ ಕಚೇರಿಗಳಿಂದ ಉಚಿತವಾಗಿ ವೀಸಾ ಹಂಚಿಕೆ ಕಾರ್ಯ ನಡೆಯುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry