ಭಾರತದ ಸವಾಲು ಅಂತ್ಯ

7

ಭಾರತದ ಸವಾಲು ಅಂತ್ಯ

Published:
Updated:
ಭಾರತದ ಸವಾಲು ಅಂತ್ಯ

ಬೀದರ್: ಅಂಕಿತಾ ಮತ್ತು ಪ್ರಾರ್ಥನಾ ಸೋತಿದ್ದರಿಂದ ಬೀದರ್ ಐಟಿಎಫ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಭಾರತೀಯರ ಸವಾಲು ಅಂತ್ಯಗೊಂಡಿದೆ.ಸೆಮಿಫೈನಲ್ ಪಂದ್ಯಗಳಲ್ಲಿ ಭಾರತದ ಅಂಕಿತಾ ರೈನಾ ಮತ್ತು ಪ್ರಾರ್ಥನಾ ತೋಂಬ್ರೆ ಅವರ ಹೋರಾಟ ಎದುರಾಳಿಗಳ ಖಚಿತ ಸರ್ವ್, ವೇಗದ ಆಟದ ನಡುವೆ ಮಸುಕಾಯಿತು. ಮೊದಲ ಪಂದ್ಯದಲ್ಲಿ ಪ್ರಾರ್ಥನಾ ತೋಂಬ್ರೆ ಅವರು ಜಪಾನ್‌ನ  ಯೂಮಿ ಮಿಯಾಜಾಕಿ ಅವರ ಎದುರು 4-6, 2-6ರಿಂದ ಸೋಲನುಭವಿಸಿದರು.ಬಳಿಕ ಇನ್ನೊಂದು ಪಂದ್ಯದಲ್ಲಿ ಭಾರತದ ಪರ ಏಕೈಕ ಆಸರೆಯಾಗಿ ಉಳಿದ್ದ ಅಂಕಿತಾ ರೈನಾ ಅವರಿಗೆ ತವರು ನೆಲದ ಪ್ರೇಕ್ಷಕರ ಬೆಂಬಲ ಸಾಕಷ್ಟಿತ್ತು. ಆದರೆ, ಈ ಪಂದ್ಯದಲ್ಲಿಯೂ ಮೊದಲ ಸೆಮಿಫೈನಲ್‌ನಂತೆ ಎದುರಾಳಿ ಸ್ಪರ್ಧಿಯೇ ಮೇಲುಗೈ ಸಾಧಿಸಿದರು.ಹಾಂಕಾಂಗ್‌ನ ವಿಂಗ್ ಯೂ ವೆನಿಸ್ ಅವರು ಮೊದಲ ಸೆಟ್ ಅನ್ನು 6-3 ರಿಂದ ಗೆದ್ದುಕೊಂಡಿದ್ದು, ಎರಡನೇ ಸೆಟ್‌ಗೆ ವಿಶ್ವಾಸದಿಂದ ಕಣಕ್ಕಿಳಿದರು. ಅದೇ ವಿಶ್ವಾಸ ರೈನಾ ಅವರಲ್ಲಿ ಕಂಡುಬರಲಿಲ್ಲ. ಎರಡನೇ ಸೆಟ್‌ನಲ್ಲಿಯೂ ರೈನಾ 2-6 ರಿಂದ ಕೈಚೆಲ್ಲುವುದರೊಂದಿಗೆ ಇಲ್ಲಿ ಆತಿಥೇಯರ ಹೋರಾಟಕ್ಕೂ ತೆರೆಬಿದ್ದಿತು.ಶನಿವಾರ ನಡೆಯುವ ಅಂತಿಮ ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ವಿಂಗ್ ಯೂ ವೆನಿಸ್ ಮತ್ತು ಜಪಾನ್‌ನ ಯುಮಿ ಮಿಯಾಜಾಕಿ ಅವರ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆಯಲಿದೆ.ರಿಷಿಕಾ ಸಂಭ್ರಮ:  ಭಾರತದ ರಿಷಿಕಾ ಸುಂಕಾರ ಮತ್ತು ಉಕ್ರೇನ್‌ನ ಒಲೆಸ್ಕಾಂದಾ ಕೊರಶಿವಿಲಿ ಜೋಡಿ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು. ಶುಕ್ರವಾರ ನಡೆದ  ಫೈನಲ್‌ನಲ್ಲಿ ಭಾರತ- ಉಕ್ರೇನ್ ಜೋಡಿ       ಥಾಯ್ಲೆಂಡ್‌ನ ನುನ್‌ಗದ್ದಾ ವಾನಾಸುಕ್ ಮತ್ತು ಚೀನಾದ ನನ್‌ನನ್ ಜೆಂಗ್ ಜೋಡಿಯನ್ನು 6-4, 7-5 ನೇರ ಸೆಟ್‌ಗಳಿಂದ ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry