ಭಾರತದ ಸವಾಲು ಅಂತ್ಯ

7
ಬ್ಯಾಡ್ಮಿಂಟನ್‌: ಶ್ರೀಕಾಂತ್‌ಗೆ ಸೋಲು

ಭಾರತದ ಸವಾಲು ಅಂತ್ಯ

Published:
Updated:

ಟೋಕಿಯೊ (ಪಿಟಿಐ): ಅಜಯ್‌ ಜಯರಾಮ್‌, ಕೆ. ಶ್ರೀಕಾಂತ್‌ ಮತ್ತು ಎಚ್‌.ಎಸ್‌. ಪ್ರಣೋಯ್‌ ಅವರು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪ್ರಣೋಯ್‌ 11-21, 22-20, 13-21 ರಲ್ಲಿ ಚೀನಾದ ಹುವಾನ್‌ ಗಾವೊ ಕೈಯಲ್ಲಿ ಪರಾಭವಗೊಂಡರು. ಪ್ರಣೋಯ್‌ ಸೋಲು ಅನುಭವಿಸುವ ಮುನ್ನ ಎದುರಾಳಿಗೆ ತಕ್ಕ ಪೈಪೋಟಿ ನೀಡಿದರು.ಐದನೇ ಶ್ರೇಯಾಂಕದ ಆಟಗಾರ ವಿಯೆಟ್ನಾಂನ ತಿಯಾನ್‌ ಮಿನ್‌ ನುಯೆನ್‌ 21-18, 21-13 ರಲ್ಲಿ ಅಜಯ್‌ ಜಯರಾಮ್‌ ಅವರನ್ನು ಮಣಿಸಿದರು. ವಿಶ್ವ ರ‍್ಯಾಂಕಿಂಗ್ ‌ನಲ್ಲಿ 30ನೇ ಸ್ಥಾನದಲ್ಲಿರುವ ಅಜಯ್‌ 40 ನಿಮಿಷಗಳಲ್ಲಿ ಸೋಲು ಅನುಭವಿಸಿದರು.ಶ್ರೀಕಾಂತ್‌ 18-21, 9-21 ರಲ್ಲಿ ಜಪಾನ್‌ನ ಕೆನಿಚಿ ತಾಗೊ ಕೈಯಲ್ಲಿ ಪರಾಭವಗೊಂಡರು. ಇಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಕೆನಿಚಿ 39 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿ ಕೊಂಡರು.ಮಹಿಳೆಯರ ವಿಭಾಗದಲ್ಲಿ  ಪಿ.ವಿ.­ಸಿಂಧು ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಈ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ ಪಾಲ್ಗೊಂಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry