ಭಾರತದ ಸೆಮಿಫೈನಲ್ ಕನಸು ಭಗ್ನ

7

ಭಾರತದ ಸೆಮಿಫೈನಲ್ ಕನಸು ಭಗ್ನ

Published:
Updated:

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ತನ್ನ ಕಡೆಯ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ರೋಚಕ ಘಟ್ಟದಲ್ಲಿ 1 ರನ್‌ಗಳಿಂದ ಮಣಿಸಿತಾದರೂ  ಸೆಮಿಫೈನಲ್ ಪ್ರವೇಶಿಸಲು  ವಿಫಲವಾಯಿತು.ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಗೆಲುವಿಗೆ ಭಾರತ ಒಡ್ಡಿದ್ದ 152 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 151 ರನ್‌ಗಳಿಸಿ ಸರ್ವಪತನ ಕಂಡಿತು. ಭಾರತ ಒಂದು ರನ್‌ಗಳ ರೋಚಕ ಜಯ ಸಾಧಿಸಿತಾದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.ಸೆಮಿಫೈನಲ್ ಪ್ರವೇಶಿಸಲು ಭಾರತ ದಕ್ಷಿಣ ಆಫ್ರಿಕಾವನ್ನು 121 ರನ್‌ಗಳಿಗೆ ನಿಯಂತ್ರಿಸಬೇಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry