ಭಾರತದ ಸೇನೆ ಗಡಿ ಉಲ್ಲಂಘನೆ ಮಾಡಿಲ್ಲ : ಬಿಕ್ರಂ ಸಿಂಗ್

7

ಭಾರತದ ಸೇನೆ ಗಡಿ ಉಲ್ಲಂಘನೆ ಮಾಡಿಲ್ಲ : ಬಿಕ್ರಂ ಸಿಂಗ್

Published:
Updated:
ಭಾರತದ ಸೇನೆ ಗಡಿ ಉಲ್ಲಂಘನೆ ಮಾಡಿಲ್ಲ : ಬಿಕ್ರಂ ಸಿಂಗ್

ಖೈರೈರ್ (ಪಿಟಿಐ), : ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು  (ಎಲ್ಒಸಿ) ದಾಟಿ ಅಪ್ರಚೋದಿತ  ದಾಳಿ ನಡೆಸಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್  ಪಾಕಿಸ್ತಾನದ ಆರೋಪಗಳನ್ನು ತಿರಸ್ಕರಿಸಿದ್ದಾರೆ.ಜನವರಿ 8 ರಂದು ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನ ಸೋನಾ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರು ಭಾರತದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿತ್ತು . ಮೃತ ಹೇಮರಾಜ್ ಕುಟುಂಬವನ್ನು ಭೇಟಿಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿಲ್ಲ, ಅಲ್ಲದೆ ನಮ್ಮ ಸೈನಿಕರು ಯಾವುದೇ ಅಪ್ರಚೋದಿತ ದಾಳಿ ನಡೆಸಿಲ್ಲ,  ನಾವು  ಮಾನವ ಹಕ್ಕುಗಳನ್ನು ಗೌರವಿಸುತ್ತೇವೆ  ಎಂದು ಅವರು ತಿಳಿಸಿದರು.

ಭಾರತದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಮ್ಮ ಸೈನಿಕನೊಬ್ಬನು ಮೃತ ಪಟ್ಟಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿತ್ತು, ಇದಕ್ಕೆ ಪ್ರತಿಕ್ರಿಯಿಸಿದ ಭೂಸೇನಾ ಮುಖ್ಯಸ್ಥರು ಎರಡು ಕಡೆ ನಡೆದ ಗುಂಡಿನ ದಾಳಿಯಲ್ಲಿ ಮೃತ ಪಟ್ಟಿರಬಹುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry