ಸೋಮವಾರ, ಜನವರಿ 20, 2020
17 °C

ಭಾರತೀಯನಿಗೆ 20 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಮಾದಕ ದ್ರವ್ಯ ತಯಾರಕ ಜಾಲಕ್ಕೆ ಸೇರಿದ ಲಕ್ಷಾಂತರ ಡಾಲರ್ ಅಕ್ರಮ ಹಣವನ್ನು ಸಕ್ರಮಗೊಳಿಸಲು ನೆರವಾದ ಭಾರತೀಯ ಮೂಲದ ಅಮೆರಿಕದ ಉದ್ಯಮಿ ವಿಕ್ರಮ್ ದತ್ತ (51) ಅವರಿಗೆ ಮ್ಯಾನ್‌ಹಟನ್ ಫೆಡರಲ್ ನ್ಯಾಯಾಲಯ ಶನಿವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.`ತಮ್ಮ ಸುಗಂಧ ದ್ರವ್ಯ ವ್ಯವಹಾರವನ್ನು ಈ ರೀತಿ ದುರುಪಯೋಗ ಮಾಡಿಕೊಂಡದ್ದಕ್ಕೆ  ವಿಕ್ರಮ್ ಅವರು ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಮಾದಕ ವಸ್ತು ಜಾಲದೊಂದಿಗೆ ವ್ಯವಹರಿಸುವವರಿಗೆ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ~ ಎಂದು ಅಟಾರ್ನಿ ಜನರಲ್ ಪ್ರೀತ್ ಭರಾರ ಹೇಳಿದ್ದಾರೆ. 

 

ಪ್ರತಿಕ್ರಿಯಿಸಿ (+)