ಭಾರತೀಯರಿಗೆ ನೌಕರಿ- ಬ್ರಿಟನ್ ಯೋಜನೆ

7

ಭಾರತೀಯರಿಗೆ ನೌಕರಿ- ಬ್ರಿಟನ್ ಯೋಜನೆ

Published:
Updated:

ಲಂಡನ್ (ಪಿಟಿಐ): ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ 20,000 ಭಾರತೀಯರಿಗೆ ಪ್ರತಿವರ್ಷ ನೌಕರಿಗೆ ಅವಕಾಶ ನೀಡಲು ಬ್ರಿಟನ್ ಸರ್ಕಾರ ಸಿದ್ಧತೆ ನಡೆಸುತ್ತಿದೆ.ಐರೋಪ್ಯ ಒಕ್ಕೂಟ ಮತ್ತು ಭಾರತ ಮುಕ್ತ ವ್ಯಾಪಾರ ಒಪ್ಪಂದದ ಕುರಿತಂತೆ ಬ್ರಸೆಲ್ಸ್‌ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ ಎಂದು ಸಂಡೆ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಂತರ ಕಂಪೆನಿ ವರ್ಗಾವಣೆ ವೀಸಾ ಅನ್ವಯ ಬ್ರಿಟನ್ ಪ್ರವೇಶಿಸಲು ಪರಿಣತರಿಗೆ ಅವಕಾಶ ನೀಡಲಾಗುವುದು.ಈ ವೀಸಾ ಅನ್ವಯ ಪ್ರವೇಶ ಪಡೆದವರು ಐದು ವರ್ಷಗಳ ಕಾಲ ಇಲ್ಲಿ ವಾಸಿಸಹುದಾಗಿದೆ. ಈ ಹೊಸ ಒಪ್ಪಂದಕ್ಕೆ ಜೂನ್ ಅಂತ್ಯದ ವೇಳೆಗೆ ಸಹಿ ಬೀಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry