ಮಂಗಳವಾರ, ಅಕ್ಟೋಬರ್ 22, 2019
21 °C

ಭಾರತೀಯರಿಗೆ ಪುರಸ್ಕಾರ

Published:
Updated:

ವಾಷಿಂಗ್ಟನ್ (ಪಿಟಿಐ): ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯದವರ ಏಳ್ಗೆಗಾಗಿ ಸೇವೆ ಸಲ್ಲಿಸುತ್ತಿರುವ ಏಳು ಮಂದಿ ಅನಿವಾಸಿ ಭಾರತೀಯರಿಗೆ ಸರ್ಕಾರೇತರ ಸಂಸ್ಥೆಯೊಂದು ಪ್ರಶಸ್ತಿ ನೀಡಿ ಗೌರವಿಸಲಿದೆ.ಭಾರತೀಯ ಮೂಲದವರ ಜಾಗತಿಕ ಸಂಘಟನೆ (ಜಿಒಪಿಐಒ) ಮಂಗಳವಾರ ಸಮುದಾಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯರ ಹೆಸರುಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಈ ವಾರಾಂತ್ಯದಲ್ಲಿ ಜೈಪುರದಲ್ಲಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.ಬಹರೇನ್‌ನಲ್ಲಿ ನೆಲೆಸಿರುವ ಫೈಸಲ್ ಕೊಟ್ಟಿಕೊಲ್ಲಾನ್, ಫ್ರಾನ್ಸ್‌ನ ರಘುನಾಥ್ ಮನೆಟ್, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ವೇದ ಪ್ರಕಾಶ್ ನಂದಾ, ಇಂಗ್ಲೆಂಡ್‌ನಲ್ಲಿರುವ ಡಾ. ರಮಿ ರೇಂಜರ್, ಅಮೆರಿಕದ ಡಾ. ಅಜಿತ್ ಸಿಂಘ್ವಿ, ಮಲೇಷ್ಯಾದಲ್ಲಿರುವ ದಾತುಕ್ ಎ ವೈದ್ಯಲಿಂಗಮ್ ಮತ್ತು  ಶ್ರೀಲಂಕಾದಲ್ಲಿ ನೆಲೆಸಿರುವ ಹೆಂಡ್ರಿ ಎಚ್ ವಿಕ್ರಮಸಿಂಘೆ ಪ್ರಶಸ್ತಿಗೆ ಆಯ್ಕೆ ಆಗಿರುವ ಭಾರತೀಯರಾಗಿದ್ದಾರೆ.ಭಾರತದ ಹಡಗು ಖಾತೆ ಸಚಿವಾಲಯದ ಕಾರ್ಯದರ್ಶಿಯಾಗಿರುವ ಕೆ. ಮೋಹನ್‌ದಾಸ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮತ್ತೊಬ್ಬರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)