ಭಾರತೀಯರು ಅಸ್ಥಿರ ಮನಸ್ಸಿನವರು!

7

ಭಾರತೀಯರು ಅಸ್ಥಿರ ಮನಸ್ಸಿನವರು!

Published:
Updated:

ಲಂಡನ್‌ (ಪಿಟಿಐ): ಭಾರತೀಯರು ಸ್ನೇಹಪರರು ಆದರೆ, ಅಸ್ಥಿರ ಮನಸ್ಸಿನವರು. ನಿರ್ಧಾರ ತೆಗೆದು­ಕೊಳ್ಳು­ವುದಕ್ಕೆ ಮೀನ–ಮೇಷ ಎಣಿಸುತ್ತಾರೆ!– ಭಾರತೀಯ ಪ್ರವಾಸಿಗರ ಕುರಿತಾಗಿ ಬ್ರಿಟನ್‌ ಸರ್ಕಾರದ ಪ್ರವಾಸೋದ್ಯಮ ಸಂಸ್ಥೆ ‘ವಿಸಿಟ್‌ ಬ್ರಿಟನ್‌’, ರಾಷ್ಟ್ರದ ಎಲ್ಲಾ ಹೋಟೆಲ್‌ಗಳ ಮಾಲೀಕರಿಗೆ ಹೊರಡಿಸಿರುವ ಹೊಸ ಮಾರ್ಗದರ್ಶಿ ಸೂತ್ರದಲ್ಲಿ ಉಲ್ಲೇಖಿಸಿ­ರುವ ಅಂಶಗಳಿವು.ಭಾಷಾ ಉಚ್ಚಾರಣಾ ಶೈಲಿಯಿಂದ ಭಾರತೀಯರನ್ನು ಹೀಯಾಳಿಸಬೇಡಿ ಎಂದೂ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.

ದೇಶದಲ್ಲಿ ಸಾಂಸ್ಕೃತಿಕ ನಿಯಮಗಳ ಉಲ್ಲಂಘನೆಯನ್ನು ತಡೆಯು­ವುದಕ್ಕಾಗಿ ‘ವಿಸಿಟ್‌ಬ್ರಿಟನ್‌’ ಈ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry