ಗುರುವಾರ , ನವೆಂಬರ್ 21, 2019
26 °C
ಪಂಚರಂಗಿ

ಭಾರತೀಯರು ಒಪ್ಪಿಕೊಂಡಿದ್ದಕ್ಕೆ ಸನ್ನಿಗೆ ಸಂತಸ

Published:
Updated:

ಕಪ್ಪು ಕಂಗಳ, ನೀಲಿ ಚಿತ್ರಗಳ ಚೆಲುವೆ ಸನ್ನಿ ಲಿಯೋನ್ ಭಾರತೀಯರು ತಮ್ಮನ್ನು ಒಪ್ಪಿಕೊಂಡಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.`ಭಾರತೀಯರು ನನ್ನ ಮತ್ತಷ್ಟು ಚಿತ್ರಗಳನ್ನು ನೋಡಲು ಬಯಸಿದ್ದಾರೆ. ಜತೆಗೆ ತಾನು ನಟಿಸಿದ ಚಿತ್ರಗಳನ್ನು ಹಾಗೂ ರಾಯಭಾರಿಯಾಗಿರುವ ಉತ್ಪನ್ನಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ' ಎಂದು ಸನ್ನಿ ಸಂತಸ ವ್ಯಕ್ತಪಡಿಸಿದ್ದಾರೆ.ಪಂಜಾಬ್ ಮೂಲದ ಸನ್ನಿ ಲಿಯೋನ್ ಕೆನಡಾದಲ್ಲಿ ನೆಲೆಸಿದ್ದಾರೆ. `ಬಿಗ್ ಬಾಸ್'ನ ಐದನೇ ಆವೃತ್ತಿಯ ಮೂಲಕ ಭಾರತದ ಮನರಂಜನಾ ಕ್ಷೇತ್ರಕ್ಕೆ ಅವರು ಪದಾರ್ಪಣೆ ಮಾಡಿದರು. ನಂತರ `ಜಿಸ್ಮ್ 2' ಹಾಗೂ ಕೆಲವು ಉತ್ಪನ್ನಗಳ ಜಾಹೀರಾತಿಗೂ ಸಹಿ ಹಾಕಿದ್ದರು. ಕೆಲವೇ ದಿನಗಳಲ್ಲಿ ಗಿಗಿಗಿ ಎಂಬ ಶಕ್ತಿವರ್ಧಕ ಪೇಯದ ಪ್ರಚಾರ ರಾಯಭಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.`ಭಾರತೀಯರು ನನ್ನನ್ನು ಒಪ್ಪಿಕೊಂಡಿದ್ದಾರೆ. ಎಲ್ಲಾ ವಯೋಮಾನದವರೂ ಇಷ್ಟಪಟ್ಟಿದ್ದಾರೆ. ಇದಕ್ಕಾಗಿ ನಾನು ಭಾರತೀಯರಿಗೆ ಆಭಾರಿಯಾಗಿದ್ದೆ' ಎಂದಿರುವ ಸನ್ನಿ, `ಶೂಟೌಟ್ ಅಟ್ ವಾಡಾಲಾ' ಚಿತ್ರದಲ್ಲಿ ಓ ಲೈಲಾ ಎಂಬ ಐಟಂ ಗೀತೆಗೆ ಹೆಜ್ಜೆ ಹಾಕಿದ್ದಾರೆ.ಜತೆಗೆ `ರಾಗಿಣಿ ಎಂಎಂಎಸ್2' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ಹಲವು ಅವಕಾಶಗಳನ್ನು ಅವರು ಬಾಚಿಕೊಂಡಿದ್ದಾರೆ.

 

ಪ್ರತಿಕ್ರಿಯಿಸಿ (+)