ಭಾರತೀಯರ ಕಪ್ಪು ಹಣ 24.5 ಲಕ್ಷ ಕೋಟಿ!

7

ಭಾರತೀಯರ ಕಪ್ಪು ಹಣ 24.5 ಲಕ್ಷ ಕೋಟಿ!

Published:
Updated:

ನವದೆಹಲಿ (ಪಿಟಿಐ): ಸ್ವಿಸ್ ಬ್ಯಾಂಕ್ ಸೇರಿದಂತೆ ಇತರ ವಿದೇಶಿ ಬ್ಯಾಂಕ್‌ಗಳ ಠೇವಣಿದಾರರ ಪೈಕಿ ಭಾರತೀಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿ ಭಾರತೀಯರ ಸುಮಾರು 24.5 ಲಕ್ಷ ಕೋಟಿ ರೂಪಾಯಿ ಅಕ್ರಮ ಹಣ ಕೊಳೆಯುತ್ತಿದೆ ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಅವರು ಸೋಮವಾರ ಬಹಿರಂಗಪಡಿಸಿದ್ದಾರೆ.ಸ್ವಿಟ್ಜರ್ಲೆಂಡ್, ಮಾರಿಷಸ್, ಬ್ರಿಟನ್ ವರ್ಜಿನ್ ದ್ವೀಪಗಳು ಸೇರಿದಂತೆ ಅನೇಕ ರಾಷ್ಟ್ರಗಳು ಕಳ್ಳ ಹಣ ಠೇವಣಿದಾರರ ಸ್ವರ್ಗಗಳಾಗಿವೆ. ಈ ದೇಶಗಳಿಂದ ಅಕ್ರಮ ಹಣದ ವಹಿವಾಟಿನ ಬಗ್ಗೆ ಮಾಹಿತಿ ಪಡೆಯುವುದು ಅಷ್ಟು ಸುಲಭ ಸಾಧ್ಯವಲ್ಲ. ಕಾನೂನಾತ್ಮಕವಾಗಿ ಇದೊಂದು ಸುದೀರ್ಘ ಮತ್ತು ಜಟಿಲವಾದ ಪ್ರಕ್ರಿಯೆಯಾಗಿದ್ದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ತನಿಖೆಯ ಪ್ರತಿ ಹಂತದಲ್ಲೂ ಕಾನೂನಿನ ಪ್ರಕಾರ ಆಯಾ ದೇಶಗಳಿಗೆ ಮನವಿ ಕಳಿಸಬೇಕಾಗುತ್ತದೆ. ಇದು ತನಿಖೆ ವಿಳಂಬವಾಗಲು ಕಾರಣ ಎಂದು ತಿಳಿಸಿದರು.ಕೇಂದ್ರದ ಅಸಹಾಯಕತೆ: ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಸಹಕಾರ ದೊರೆಯದ ಕಾರಣ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಮರಳಿ ತರುವುದು ಸುಲಭದ ಮಾತಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ. ಆದರೆ, ಕಪ್ಪುಹಣವನ್ನು ಮರಳಿ ಭಾರತಕ್ಕೆ ತರಲು ತಾನು ಬದ್ಧ ಎಂದು ಇದೇ ವೇಳೆ ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ ಅವರು  ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry