ಭಾರತೀಯರ ತಾಳ್ಮೆ ಪರೀಕ್ಷೆ ಮಾಡಬೇಡಿ: ಲೆ.ಜ. ಪರ್ನಾಯಕ್

7

ಭಾರತೀಯರ ತಾಳ್ಮೆ ಪರೀಕ್ಷೆ ಮಾಡಬೇಡಿ: ಲೆ.ಜ. ಪರ್ನಾಯಕ್

Published:
Updated:
ಭಾರತೀಯರ ತಾಳ್ಮೆ ಪರೀಕ್ಷೆ ಮಾಡಬೇಡಿ: ಲೆ.ಜ. ಪರ್ನಾಯಕ್

ನವದೆಹಲಿ (ಪಿಟಿಐ): ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತೀಯರ ತಾಳ್ಮೆ ಪರೀಕ್ಷೆ ಮಾಡುತ್ತಿರುವುದು ಸರಿಯಲ್ಲ ಎಂದು ಸೇನಾ ಕಮಾಂಡರ್ ಲೆಪ್ಟಿನೆಂಟ್ ಜನರಲ್ ಕೆ.ಟಿ. ಪರ್ನಾಯಕ್ ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಸೇನೆಗೆ ಪಾಕ್ ಸೈನಿಕರ ಸವಾಲು ದೊಡ್ಡದೇನಲ್ಲ ಆದರೆ ನಾವು ಗಡಿಯಲ್ಲಿ ಶಾಂತಿಯನ್ನು ಬಯಸುತ್ತೇವೆ ಎಂದು ತಿಳಿಸಿದರು.ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಅಂತರರಾಷ್ಟ್ರೀಯ ಸಮುದಾಯಕ್ಕೂ ತಿಳಿದಿದೆ. ಹೀಗೆಯೆ ಮುಂದುವರೆದರೆ ಭಾರತ ಕೈಕಟ್ಟಿ ಕೂರುವುದಿಲ್ಲ ಎಂದು ಪರ್ನಾಯಕ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry