ಭಾರತೀಯ ಉದ್ಯಮಿಗೆ ಬ್ಲ್ಯಾಕ್‌ಬೆರಿ ಒಡೆತನ

6

ಭಾರತೀಯ ಉದ್ಯಮಿಗೆ ಬ್ಲ್ಯಾಕ್‌ಬೆರಿ ಒಡೆತನ

Published:
Updated:

ನವದೆಹಲಿ: ಕೆನಡಾ ಮೂಲದ ಸ್ಮಾರ್ಟ್‌­­ಫೋನ್‌ ತಯಾರಿಕಾ ಕಂಪೆನಿ ಬ್ಲ್ಯಾಕ್‌ಬೆರಿಯನ್ನು ಭಾರತೀಯ ಮೂಲದ ಕೆನಡಾ ಉದ್ಯಮಿ ಪ್ರೇಮ್‌ ವತ್ಸಾ ಒಡೆತನದ ಫೇರ್‌ಫಾಕ್ಸ್ ಫೈನಾ­ಶ್ಶಿಯಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌  ಅಂದಾಜು ₨28,200 ಕೋಟಿಗೆ (470 ಕೋಟಿ ಡಾಲರ್‌– ಪ್ರತಿ ಷೇರಿಗೆ 9 ಡಾಲರ್‌ನಂತೆ) ಖರೀ­ದಿಸಲು ಒಪ್ಪಂದ ಮಾಡಿಕೊಂಡಿದೆ.ಪ್ರೇಮ್ ವತ್ಸಾ ಹುಟ್ಟಿದ್ದು ಹೈದರಾ­ಬಾದ್‌ನಲ್ಲಿ. ಈಗ ಅವರ ಕುಟುಂಬ ಟೊರಾಂಟೊದಲ್ಲಿ ನೆಲೆಗೊಂ­ಡಿದೆ. ಬ್ಲ್ಯಾಕ್‌­ಬೆರಿ ಕಂಪೆನಿಯಲ್ಲಿ ಗರಿಷ್ಠ ಷೇರು­ಪಾಲು ಹೊಂದಿರುವವರಲ್ಲಿ ಪ್ರೇಮ್‌ ಕೂಡ ಒಬ್ಬರು. ಆಗಸ್ಟ್‌ನಲ್ಲಿ ಅವರು ಬ್ಲ್ಯಾಕ್‌ಬೆರಿ ನಿರ್ದೇಶಕ ಮಂಡಳಿ­ಯಿಂದ ಹೊರಬಂದಿದ್ದರು.ಪ್ರೇಮ್‌ ವತ್ಸಾ ಅವರನ್ನು ‘ಕೆನಡಾದ ವಾರೆನ್‌ ಬಫೆಟ್‌’ ಎಂದೂ ಕರೆಯ­ಲಾಗುತ್ತದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆಪಲ್‌ ಮತ್ತು ಸ್ಯಾಮ್ಸಂಗ್‌ನಿಂದ ಬ್ಲ್ಯಾಕ್‌ಬೆರಿ  ತೀವ್ರ ಸ್ಫರ್ಧೆ ಎದುರಿ­ಸುತ್ತಿದೆ. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಂಪೆನಿ 4,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry