ಮಂಗಳವಾರ, ಜೂನ್ 22, 2021
24 °C

ಭಾರತೀಯ ಎನ್‌ಜಿಒಗೆ ಚೊಚ್ಚಲ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಪರಿವರ್ತನೆಗಾಗಿ ನೀಡುತ್ತಿರುವ ಪ್ರಶಸ್ತಿಗೆ ಭಾರತದ `ಚಿಂತನ್~ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯು ಆಯ್ಕೆ ಆಗಿದೆ.ರದ್ದಿ ಆಯುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಹಾಗೂ ಬಾಲಕಾರ್ಮಿಕ ಪಿಡುಗನ್ನು ಹೋಗಲಾಡಿಸಲು `ಚಿಂತನ್~ ಶ್ರಮಿಸುತ್ತಿದೆ. ಅಂತರರಾಷ್ಟ್ರೀಯ ಪ್ರತಿನಿಧಿಗಳನ್ನು ಒಳಗೊಂಡ ಆಯ್ಕೆ ಸಮಿತಿಯು `ಚಿಂತನ್~ ಸಂಸ್ಥೆಯನ್ನು ಈ ಪ್ರಶಸ್ತಿಗೆ ಗುರುತಿಸಿದೆ. `ಚಿಂತನ್~ ಜೊತೆಗೆ ಕೀನ್ಯಾ ಮತ್ತು ತಾಂಜೇನಿಯಾ ರಾಷ್ಟ್ರಗಳ ಎನ್‌ಜಿಒಗಳೂ ಈ ಪ್ರಶಸ್ತಿಗೆ ಭಾಜನವಾಗಿವೆ.ಈ ಪ್ರಶಸ್ತಿಯನ್ನು ರಾಕ್‌ಫೆಲ್ಲರ್ ಪ್ರತಿಷ್ಠಾನವು ಸ್ಥಾಪಿಸಿದ್ದು, ಇದನ್ನು ಅಮೆರಿಕ ವಿದೇಶಾಂಗ ಇಲಾಖೆಯ `ಮಹಿಳೆ ಮತ್ತು ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ನಿಧಿ~ ಮೂಲಕ ನೀಡಲಾಗುತ್ತದೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಪ್ರತಿಷ್ಠಾನದ ಅಧ್ಯಕ್ಷೆ ಜುಡಿತ್ ರೊಡಿನ್ ಶುಕ್ರವಾರ ಈ ಪ್ರಶಸ್ತಿಯ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ದೆಹಲಿಯಲ್ಲಿ ನೆಲೆಸಿರುವ ಭಾರತಿ ಚತುರ್ವೇದಿ ಎಂಬುವವರು ಈ ಸಂಸ್ಥೆಯ ಸ್ಥಾಪಕರಾಗಿದ್ದು, ಅವರು `ಹಿಂದೂಸ್ತಾನ್ ಟೈಮ್ಸ~ ಪತ್ರಿಕೆಯಲ್ಲಿ ಅಂಕಣಕಾರ್ತಿಯೂ ಆಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.