ಶನಿವಾರ, ಮೇ 28, 2022
27 °C

ಭಾರತೀಯ ಕಿಸಾನ್ ಸಂಘದ ಪ್ರತಿಭಟನೆ:ಹಾಲು ದರ ಇಳಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಇಳಿಕೆ ಮಾಡಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಡೇರಿ ವೃತ್ತದ ರಾಜ್ಯ ಹಾಲು ಮಹಾ ಮಂಡಳದ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.`ಹೆಚ್ಚುತ್ತಿರುವ ಪಶು ಆಹಾರದ ಬೆಲೆ ಹಾಗೂ ಮೇವಿನ ಕೊರತೆಯಿಂದ ಜಾನುವಾರುಗಳ ಪೋಷಣೆಯೇ ಕಷ್ಟವಾಗಿದೆ. ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ ಮತ್ತು ವಿದೇಶಗಳಿಂದ ಹಾಲಿನ ಉತ್ಪನ್ನಗಳ ಆಮದು ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿದೆ ಎಂದು ಕೆಎಂಎಫ್ ಹೇಳುತ್ತಿದೆ. ಈ ಕಾರಣ ನೀಡಿ ಹಾಲಿನ ದರವನ್ನು ಒಂದೂವರೆಯಿಂದ ಎರಡು ರೂಪಾಯಿ ಇಳಿಕೆ ಮಾಡಿರುವುದರಿಂದ ರೈತರಿಗೆ ಹಾಗೂ ಜಾನುವಾರು ಸಾಕಣೆದಾರರಿಗೆ ನಷ್ಟವಾಗುತ್ತಿದೆ.ಸರ್ಕಾರ ಕೂಡಲೇ ಹಾಲಿನ ದರ ಇಳಿಕೆಯ ನಿರ್ಧಾರವನ್ನು ಕೈ ಬಿಡಬೇಕು~ ಎಂದು ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ಒತ್ತಾಯಿಸಿದರು.ವಾಸ್ತವವಾಗಿ ಪ್ರತಿ ಲೀಟರ್ ಹಾಲಿನ ಉತ್ಪಾದನಾ ವೆಚ್ಚ 28 ರಿಂದ 30 ರೂಪಾಯಿಗಳಾಗುತ್ತದೆ. ಆದರೆ ಸದ್ಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ 18 ರಿಂದ 20 ರೂಪಾಯಿ ನೀಡಲಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಪಶು ಆಹಾರದ ಬೆಲೆ ಹೆಚ್ಚಾಗುತ್ತಲೇ ಇದೆ. ಇದು ರೈತರಿಗೆ ಸರ್ಕಾರ ಮಾಡುತ್ತಿರುವ ನೇರ ಅನ್ಯಾಯ~ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.