ಭಾನುವಾರ, ಮೇ 9, 2021
27 °C

ಭಾರತೀಯ ದಲ್ಲಾಳಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಬ್ರಿಟನ್‌ನ ಹಣಕಾಸು ನಿಯಂತ್ರಣ ಪ್ರಾಧಿಕಾರವು ಭಾರತೀಯ ಮೂಲದ ರಿಯಾಲ್ಟಿ ದಲ್ಲಾಳಿಯೊಬ್ಬನಿಗೆ 10 ಲಕ್ಷ ಪೌಂಡ್ (ಸುಮಾರು 9.5 ಕೋಟಿ ರೂಪಾಯಿ) ಭಾರಿ ದಂಡ ವಿಧಿಸಿದೆ.ಮನೆ ಖರೀದಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಬರ್ಮಿಂಗ್‌ಹ್ಯಾಮ್ ನಿವಾಸಿ ಗುರ್‌ಪ್ರೀತ್ ಸಿಂಗ್ ಛಡ್ಡಾ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಮನೆಗಳ ಮಾರಾಟಗಾರರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದುದು ಸೇರಿದಂತೆ ಹಲವು ಆಪಾದನೆಗಳಿಗೆ ಈತ ಗುರಿಯಾಗಿದ್ದ.ರಾಷ್ಟ್ರದಲ್ಲಿ ಯಾವುದೇ ದಲ್ಲಾಳಿಯೊಬ್ಬನಿಗೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಈತ ಎರಡು ಕಂಪೆನಿಗಳ ಮೂಲಕ ಈ ವ್ಯವಹಾರ ನಡೆಸುತ್ತಿದ್ದ. ಈ ಕಂಪೆನಿಗಳ ಕಾರ್ಯಾಚರಣೆಗೂ ಈಗ ನಿಷೇಧ ಹೇರಿ, ಅದರೊಟ್ಟಿಗೆ 9.45 ಲಕ್ಷ ಪೌಂಡ್ (ಸುಮಾರು 9 ಕೋಟಿ ರೂಪಾಯಿ) ದಂಡ ವಿಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.