ಭಾರತೀಯ ಬಾಲಕಿಗೆ ವನ್ಯಜೀವಿ ಸಂರಕ್ಷಣೆ ಪ್ರಶಸ್ತಿ

7

ಭಾರತೀಯ ಬಾಲಕಿಗೆ ವನ್ಯಜೀವಿ ಸಂರಕ್ಷಣೆ ಪ್ರಶಸ್ತಿ

Published:
Updated:

ಜೊಹಾನ್ಸ್‌ಬರ್ಗ್ (ಪಿಟಿಐ): ಅಳಿವಿನ ಅಂಚಿನಲ್ಲಿರುವ ಘೇಂಡಾಮೃಗ ರಕ್ಷಣೆಗೆ ನೆರವು ನೀಡುವಂತೆ ಕೋರಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ಪತ್ರ ಬರೆದಿದ್ದ ಭಾರತೀಯ ಮೂಲದ ಏಳು ವರ್ಷದ ಬಾಲಕಿ ಅಫೀಫಾ ಪಟೇಲ್ ಪ್ರತಿಷ್ಠಿತ ವನ್ಯಜೀವಿ ಸಂರಕ್ಷಣೆ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.ಈಗಷ್ಟೇ ಒಂದನೇ ತರಗತಿ ಮುಗಿಸಿರುವ ಅಫೀಫಾ, ಸ್ಯಾನ್‌ಪಾರ್ಕ್ಸ್ ಕಾರ್ಪೋರೇಟ್ ವತಿಯಿಂದ ನೀಡಲಾಗುವ ವಾರ್ಷಿಕ 8ನೇ ಕುಡು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈಯಕ್ತಿಕ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದ ಅತಿ ಕಿರಿಯಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.`ಘೇಂಡಾಮೃಗಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಆತಂಕ ತಂದಿದೆ. ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗೆ ನಿಮ್ಮ ಪ್ರಯತ್ನ ಮುಂದುವರಿಯಲಿ. ನೀವು ನಿಜವಾದ ದಕ್ಷಿಣ ಆಫ್ರಿಕಾದವರು' ಎಂದು ಅಫೀಫಾಗೆ ಬರೆದ ಪತ್ರದಲ್ಲಿ  ಜಾಕೋಬ್ ಶ್ಲಾಘಿಸಿದ್ದರು.ಈ ಪ್ರಶಸ್ತಿಯು  20,000 ರ‌್ಯಾಂಡ್ (1 ಲಕ್ಷ 29 ಸಾವಿರ ರೂಪಾಯಿ) ನಗದು ಹಾಗೂ ಫಲಕವನ್ನು ಒಳಗೊಂಡಿದೆ.

`ಇದರಲ್ಲಿ ಸ್ವಲ್ಪ ಹಣವನ್ನು ಕಳ್ಳಬೇಟೆ ತಡೆ ಕಾರ್ಯಕ್ಕೆ ಹಾಗೂ ವನ್ಯಜೀವಿ ಕುರಿತ ಪುಸ್ತಕ ಖರೀದಿಗೆ ಬಳಸುತ್ತೇನೆ' ಎಂದು ಅಫೀಫಾ ಹೇಳಿಕೊಂಡಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry