ಮಂಗಳವಾರ, ಜೂನ್ 22, 2021
27 °C

ಭಾರತೀಯ ಮಹಿಳೆಯರಿಗೆ ವೇತನ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಐಎಎನ್‌ಎಸ್‌): ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿರುವ 11 ಭಾರತೀಯ ಮಹಿಳೆಯರಿಗೆ ಕಳೆದ 9 ತಿಂಗಳಿಂದ ವೇತನ ಪಾವತಿಯಾಗಿಲ್ಲ.  ಸೌದಿ ಅರೇಬಿಯಾದ ರಾಜಧಾನಿ ರಿಯಾ­ದ್‌ನ ಆಸ್ಪತ್ರೆಯೊಂದರಲ್ಲಿ ಕೇರಳದ 11 ಮಹಿಳೆಯರು ಸ್ವಚ್ಛತೆ ಕೆಲಸ­ಕ್ಕಾಗಿ ಗುತ್ತಿಗೆ ಆಧಾರದಲ್ಲಿ ನೇಮಕ­ವಾಗಿದ್ದರು. ಸಂಬಳ ಪಾವತಿಯಾಗುವ­ವರೆಗೂ ತಾವು ಕೆಲಸಕ್ಕೆ ಮರಳುವುದಿಲ್ಲ ಎಂದು ಮಹಿಳೆಯರು ಹೇಳಿದ್ದು, ಮಾರ್ಚ್‌ 16ರಿಂದ  ಕೆಲಸಕ್ಕೆ ತೆರಳಿಲ್ಲ ಎಂದು ‘ಅರಬ್‌ ನ್ಯೂಸ್‌’ ಶನಿವಾರ ವರದಿ ಮಾಡಿದೆ.ಸಂಬಳ ಪಾವತಿ ವಿಷಯದಲ್ಲಿ ಸಹಾಯ ಮಾಡಬೇಕೆಂದು ಈ ಮಹಿಳೆಯರು ಭಾರತೀಯ ರಾಯ­ಭಾರ ಕಚೇರಿಗೆ ಮನವಿ ಮಾಡಿ­ಕೊಂಡಿ­ದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.