ಸೋಮವಾರ, ಮೇ 17, 2021
25 °C

ಭಾರತೀಯ ಮುದ್ರಣ ಮಾಧ್ಯಮ ಅಭಿವೃದ್ಧಿ ಪಥದಲ್ಲಿ: ರಾಬಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಮೆರಿಕದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಮುದ್ರಣ ಮಾಧ್ಯಮ ಉದ್ಯಮವು ಮುಂದಿನ ದಶಕದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ವೀಕ್ಷಕ ರಾಬಿನ್ ಜೆಫ್ರಿ ಅಭಿಪ್ರಾಯ ಪಟ್ಟಿದ್ದಾರೆ.ಭಾರತದಲ್ಲಿ ಹೆಚ್ಚುತ್ತಿರುವ ಸಾಕ್ಷರತಾ ಪ್ರಮಾಣವೇ ಈ ಬೆಳವಣಿಗೆಗೆ ಕಾರಣ ಎಂದು ಅವರು ವಿವರಿಸಿದ್ದಾರೆ.

ನವದೆಹಲಿಯಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ರಾಜೇಂದ್ರ ಮಥೂರ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಜೆಫ್ರಿ, `ನನ್ನ ಅಂದಾಜಿನ ಪ್ರಕಾರ, ಭಾರತದಲ್ಲಿ ಮುಂದಿನ 10 ವರ್ಷಗಳ ಕಾಲ ದಿನ ಪತ್ರಿಕೆಗಳ ಪ್ರಸಾರದಲ್ಲಿ ಏರಿಕೆ ಕಾಣಲಿದೆ. ಇದೇ ರೀತಿ ಟವಿಗಳೂ ಬಲವರ್ಧನೆಗೊಳ್ಳಲಿವೆ~ ಎಂದರು.`ಇಲ್ಲಿ ಮುದ್ರಣ ಮಾಧ್ಯಮವು ಮುಂದಿನ 10ರಿಂದ 15 ವರ್ಷಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿರಲಿದೆ. ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ಈಗ ಕಂಡು ಬರುತ್ತಿರುವಂತೆ ಮುದ್ರಣ ಮಾಧ್ಯಮ ಇಳಿಹಾದಿಯಲ್ಲಿ ಸಾಗಲಿದೆ ಎಂದು ನನಗನ್ನಿಸುತ್ತದೆ~ ಎಂದು `ಇಂಡಿಯಾಸ್ ನ್ಯೂಸ್‌ಪೇಪರ್ ರೆವೊಲ್ಯೂಷನ್~ ಪುಸ್ತಕದ ಲೇಖಕರೂ ಆಗಿರುವ ಜೆಫ್ರಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.