ಭಾರತೀಯ ಮೂಲದ ವಿದ್ಯಾರ್ಥಿ ಕೊಲೆ

7

ಭಾರತೀಯ ಮೂಲದ ವಿದ್ಯಾರ್ಥಿ ಕೊಲೆ

Published:
Updated:

ಲಂಡನ್ (ಐಎಎನ್‌ಎಸ್): ಭಾರತೀಯ ಮೂಲದ  ಸಿಖ್ ವಿದ್ಯಾರ್ಥಿಯೊಬ್ಬನ ಕೊಲೆಗೆ ಕಾರಣರಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅಪರಾಧ ಮಾಡಿರುವುದಾಗಿ ಇಲ್ಲಿನ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾಳೆ.   ಗಗನ್‌ದೀಪ್ ಸಿಂಗ್ ಕೊಲೆಯಾದ ವ್ಯಕ್ತಿ. ಈತ ಮುಂದಿಲ್ ಮಹಿಲ್ ಎಂಬ ವಿದ್ಯಾರ್ಥಿನಿಯನ್ನು ಇಷ್ಟಪಡುತ್ತಿದ್ದ. ಆಕೆ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೂ  ಪ್ರೀತಿಸುವಂತೆ ಸಿಂಗ್ ಪದೇ ಪದೇ ಒತ್ತಾಯಿಸುತ್ತಿದ್ದ.ಇದರಿಂದ ಬೇಸತ್ತ ಮಹಿಲ್, ತನ್ನ ಸ್ನೇಹಿತರೊಂದಿಗೆ ಸೇರಿ ಸಿಂಗ್ ಮೇಲೆ ಹಲ್ಲೆ ನಡೆಸಿದರು. ಆತ ಪ್ರಜ್ಞಾಹೀನನಾಗಿದ್ದಾಗ, ಆತನನ್ನು ಕಾರಿನೊಳಗೆ ಕೂರಿಸಿ, ಅದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು.ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ, ಕೊಲೆ ಆರೋಪಿ ಮುಂದಿಲ್ ಮಹಿಲ್ ಹಾಗೂ ಕೊಲೆಗೆ ನೆರವಾದ ಆಕೆಯ ಇಬ್ಬರು ಸ್ನೇಹಿತರನ್ನು ಅಪರಾಧಿ ಎಂದು ಪರಿಗಣಿಸಿ, ಸುದೀರ್ಘ ಜೈಲುವಾಸದ ಶಿಕ್ಷೆ ನೀಡಲು ತೀರ್ಮಾನಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry